Share this news

ಬೆಂಗಳೂರು : ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಗಲಾಟೆ ವಿಚಾರಕ್ಕೆ ರಾಜ್ಯ ಸರ್ಕಾರ ತಿರುವು ಕೊಟ್ಟಿದ್ದು, ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ರಾಜ್ಯ ಸರ್ಕಾರ ಅದೇಶ ಮಾಡಲಾಗಿದೆ.

ಸ್ಥಳ ನಿಯೋಜನೆ ಮಾಡದೇ ರಾಜ್ಯ ಸರ್ಕಾರವು ಡಿ.ರೂಪಾ, ಪತಿ ಐಎಎಸ್ ಮುನೀಶ್ ಮುದ್ಗೀಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಇಬ್ಬರು ಮಹಿಳಾ ಅಧಿಕಾರಿಗಳ ಜಗಳದಲ್ಲಿ ಮೂವರಿಗೆ ತಲೆತಂಡ ಮಾಡಲಾಗಿದೆ.

ಐಎಎಸ್ ಹಾಗೂ ಐಪಿಎಸ್ ರೋಹಿಣಿ ಸಿಂಧೂರಿ ಹಾಗೂ ರೂಪಾ.ಡಿ ಅವರ ಜಗಳಕ್ಕೆ ಬೇಸತ್ತ ಸರಕಾರ ಇಬ್ಬರಿಗೂ ವರ್ಗವಾಣೆ ಮಾಡಿದ್ದು, ಈ ಇಬ್ಬರಿಗೂ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ. ಧಾರ್ಮಿಕ ಮತ್ತು ಮುಜರಾಯಿ ಇಲಾಖೆಗೆ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಎಚ್.ಬಸವರಾಜೇಂದ್ರ ಅವರನ್ನು ರೋಹಿಣಿ ಅವರ ಸ್ಥಾನಕ್ಕೆ ನಿಯೋಜಿಸಿದ್ದು, ರೋಹಿಣಿಯವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ. ಕರುಶಲ ಅಭಿವೃದ್ಧಿ ನಿಗಮದ ಎಂಡಿಯಾಗಿ ಭಾರತಿ ಅವರನ್ನು ನಿಯೋಜಿಸಿದ್ದು, ರೂಪಾ ಅವರಿಗೂ ಸ್ಥಳ ತೋರಿಸಿಲ್ಲ.

ಅಲ್ಲದೇ ರೂಪಾ ಪತಿ ಮೌನಿಶ್ ಮೌದ್ಗಿಲ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಪರ್ಸನಲ್ ಮತ್ತು ಅಡ್ಮಿನಿಸ್ಟ್ರೇಟಿವ್ ರಿಫಾರ್ಮ್ಸ್ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ಮುಂದಿನ ಆದೇಶದವರೆಗೆ ನಿಯೋಜಿಸಲಾಗಿದೆ.
 ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮುಂದೆ ವೈಯಕ್ತಿಕ ವಿಚಾರಗಳು ಹಾಗೂ ಕರ್ತವ್ಯಕ್ಕೆ ಕುರಿತಾದ ಆರೋಪಗಳನ್ನು ಹೇಳಿಕೊಳ್ಳುವ ಮೂಲಕ ಕೆಸರೆರಚಾಟ ಮಾಡಿಕೊಂಡಿದ್ದ ಐಪಿಎಸ್‌ ಅಧಿಕಾರಿ ಐಜಿಪಿ ಡಿ. ರೂಪಾ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸರ್ಕಾರದಿಂದ ನೋಟಿಸ್‌ ನೀಡಲಾಗಿದೆ. ಅದು ಕೂಡ ನೀವು ಮಾಧ್ಯಮಗಳ ಮುಂದೆ ಮಾತನಾಡದಂತೆ ಮಾತ್ರ ಸೂಚನೆ ನೀಡಲಾಗಿದ್ದು, ಯಾವುದೇ ಕಠಿಣ ಕ್ರಮವನ್ನು ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಎಚ್ಚೆತ್ತು ಸರ್ಕಾರ ವರ್ಗಾವಣೆ ಶಿಕ್ಷೆಯನ್ನು ನೀಡಿದೆ.
 ಇಬ್ಬರೂ ಸರ್ಕಾರಿ ಅಧಿಕಾರಿಗಳು ಆಗಿದ್ದಿ ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡಬಾರದು. ಇದರಲ್ಲಿ ದೂರಿಗಳು, ಮನವಿಗಳು ಅಥವಾ ಇನ್ಯಾವುದೇ ಆರೋಪಗಳನ್ನು ಮಾಡುವಂತಿಲ್ಲ. ನೀವು ಸಾರ್ವಜನಿಕವಾಗಿ ಶಾಂತಿ ಕಾಪಾಡಬೇಕು. ಆಲ್ ಇಂಡಿಯಾ ಸರ್ವೀಸ್ ಕಂಡಕ್ಟ್ ರೂಲ್ಸ್‌ ಅನ್ವಯ ನಡೆದುಕೊಳ್ಳಬೇಕು. ನೀವು ಇನ್ನುಮುಂದೆ ಯಾವುದೇ ಕಾರಣಕ್ಕೂ ಆರೋಪ, ಪ್ರತ್ಯಾರೋಪ ಸೇರಿ ಸರ್ಕಾರದ ಅಧಿಕಾರವನ್ನು ಅಥವಾ ಸೇವೆಯ ಕುರಿತಾದ ಮಾಹಿತಿಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಬಾರದು ಎಂದು ತಿಳಿಸಿದೆ.

Leave a Reply

Your email address will not be published. Required fields are marked *