ಕಾರ್ಕಳ: ಮದ್ಯಪಾನದ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮದ ಪೊಯ್ಯಜಡ್ಡು ಎಂಬಲ್ಲಿ ಸೋಮವಾರ ನಡೆದಿದೆ.
ಪೊಯ್ಯಜಡ್ಡು ಮನೆಯ ದಯಾನಂದ ಪೂಜಾರಿ (54 ವರ್ಷ) ಎಂಬವರಿಗೆ ಕಳೆದ 5ವರ್ಷದ ಹಿಂದೆ ತಲೆಯಲ್ಲಿ ನರದ ತೊಂದರೆ ಬಗ್ಗೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ಯಾವಾಗಲೂ ತಲೆ ನೋವಿನಿಂದ ನರಳುತ್ತಿದ್ದರು. ಅಲ್ಲದೇ ಮದ್ಯಪಾನ ಮಾಡುವ ಚಟವನ್ನೂ ಹೊಂದಿದ್ದರು.
ತನಗಿರುವ ತಲೆನೋವಿನ ಕಾರಣದಿಂದ ಖಿನ್ನತೆಗೆ ಒಳಗಾಗಿದ್ದ ಅವರು ಸೋಮವಾರ (ಸೆ. 8) ಸಂಜೆ ಮನೆಯ ಹಿಂಬದಿ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.