
ಕರಾವಳಿ ನ್ಯೂಸ್ ಡೆಸ್ಕ್,
ಮಧ್ಯ ಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕವಾಗಿ ತೈಲ ಹಾಗೂ ಗ್ಯಾಸ್ ಪೂರೈಕೆ ಆಗದೇ ಬೆಲೆ ಗಗನಕ್ಕೆರಿದೆ.
ಪ್ರಮುಖವಾಗಿ ಹೊಟೇಲ್ ಉದ್ಯಮಗಳಿಗೆ ಇದರ ನೇರ ಹೊಡೆತ ತಟ್ಟಿದೆ.
ಬಹುತೇಕ ಹೊಟೇಲುಗಳು LPG ಗ್ಯಾಸ್ ಮೇಲೆ ಅವಲಂಬಿತವಾಗಿದ್ದು, ಇರಾನ್ ನಿಂದ ಗ್ಯಾಸ್ ಪೂರೈಕೆಯಲ್ಲಿ ಅಡಚಣೆಯಾದ ಪರಿಣಾಮವಾಗಿ ನಗರದ ಹೆಚ್ಚಿನ ಹೊಟೇಲ್ ಉದ್ಯಮ ಬಂದ್ ಆಗುತ್ತಿದೆ.
ಇಂತಹ ಸಂಕಷ್ಟ ಕಾಲದಲ್ಲಿ ಹೊಟೇಲ್ ಉದ್ಯಮದಲ್ಲಿ ಇಂಧನ ಸ್ವಾವಲಂಬನೆಯ ಅಗತ್ಯವಿದೆ.
ಇಂದಿನ ನಗರ ಜೀವನದಲ್ಲಿ ಹೋಟೆಲ್‌ಗಳು ಮತ್ತು ಉಪಹಾರ ಗೃಹಗಳು ದೊಡ್ಡ ಪ್ರಮಾಣದಲ್ಲಿ ಹಸಿ ತ್ಯಾಜ್ಯವನ್ನು ( ಮಿಕ್ಕಿದ ಅನ್ನ , ತರಕಾರಿ ತ್ಯಾಜ್ಯ, ಹಣ್ಣುಗಳ ಸಿಪ್ಪೆ, ಮಾಂಸದ ತ್ಯಾಜ್ಯ ಇತ್ಯಾದಿ) ಉತ್ಪಾದಿಸುತ್ತಿವೆ. ಈ ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ ಪರಿಸರ ಮಾಲಿನ್ಯ, ದುರ್ವಾಸನೆ ಹಾಗೂ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆದರೆ ಇದೇ ತ್ಯಾಜ್ಯವನ್ನು ಬಯೋ ಗ್ಯಾಸ್ ಉತ್ಪಾದನೆಗೆ ಬಳಸುವುದರಿಂದ ಪರಿಸರ ಸಂರಕ್ಷಣೆಯೊಂದಿಗೆ ಆರ್ಥಿಕ ಪ್ರಯೋಜನವನ್ನೂ ಪಡೆಯಬಹುದು.
ಹಸಿ ತ್ಯಾಜ್ಯವನ್ನು ಆಮ್ಲಜನಕವಿಲ್ಲದ ಪರಿಸ್ಥಿತಿಯಲ್ಲಿ ಕರಗಿಸಿದಾಗ ಮೀಥೇನ್ ಅನಿಲ ಉತ್ಪತ್ತಿಯಾಗುತ್ತದೆ. ಈ ಅನಿಲವನ್ನೇ ಬಯೋ ಗ್ಯಾಸ್ ಎಂದು ಕರೆಯುತ್ತಾರೆ. ಇದನ್ನು ನೇರವಾಗಿ ಅಡುಗೆ ಮನೆಯಲ್ಲಿ ಬಳಸಬಹುದು.
ಹೋಟೆಲ್‌ಗಳಲ್ಲಿ ದಿನನಿತ್ಯ ಸಂಗ್ರಹವಾಗುವ ಹಸಿ ತ್ಯಾಜ್ಯವನ್ನು ವಿಶೇಷ ಬಯೋ ಗ್ಯಾಸ್ ಘಟಕದಲ್ಲಿ ಹಾಕಲಾಗುತ್ತದೆ. ಈ ಘಟಕದಲ್ಲಿ ಬ್ಯಾಕ್ಟೀರಿಯಾಗಳು ತ್ಯಾಜ್ಯವನ್ನು ಜೀರ್ಣಗೊಳಿಸಿ ಅನಿಲವನ್ನು ಉತ್ಪಾದಿಸುತ್ತವೆ. ಉತ್ಪತ್ತಿಯಾದ ಗ್ಯಾಸ್ ಅನ್ನು ಅಡುಗೆಗೆ ಬಳಸಬಹುದು. ಉಳಿದ ಮಿಶ್ರಣ ಉತ್ತಮ ಗೊಬ್ಬರವಾಗಿ ಮರು ಬಳಕೆಯಾಗುತ್ತದೆ.
ಬಯೋ ಗ್ಯಾಸ್ ಗೆ ತ್ಯಾಜ್ಯ ಬಳಕೆಯಾಗುವ ಹಿನ್ನೆಲೆಯಲ್ಲಿ
ಹೋಟೆಲ್‌ಗಳಿಂದ ಹೊರಬರುವ ತ್ಯಾಜ್ಯ ಪ್ರಮಾಣ ಕಡಿಮೆಯಾಗುತ್ತದೆ. ಜೊತೆಗೆ LPG ಅಥವಾ ಇತರ ಇಂಧನಗಳ ಅವಲಂಬನೆ ಕಡಿಮೆಯಾಗುತ್ತದೆ.
ಕಾರ್ಬನ್ ಉತ್ಪಾದನೆ ಕಡಿಮೆಯಾಗಿ ಹಸಿರು ಪರಿಸರ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ.
ಬಯೋಗ್ಯಾಸ್ ಬಳಕೆಯಿಂದ
ದೀರ್ಘಕಾಲದಲ್ಲಿ ಇಂಧನ ವೆಚ್ಚದಲ್ಲಿ ಉಳಿತಾಯವಾಗುತ್ತದೆ ಹಾಗೂ ಉಳಿದ ಸ್ಲರಿ ಕೃಷಿಗೆ ಉತ್ತಮ ಗೊಬ್ಬರವಾಗುತ್ತದೆ.
ಸರ್ಕಾರದ ಪ್ರೋತ್ಸಾಹ:
ಭಾರತ ಸರ್ಕಾರ ಮತ್ತು ಕೆಲವು ರಾಜ್ಯ ಸರ್ಕಾರಗಳು ಹೋಟೆಲ್‌ಗಳು ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಬಯೋ ಗ್ಯಾಸ್ ಘಟಕಗಳನ್ನು ಸ್ಥಾಪಿಸಲು ಅನುದಾನ ಹಾಗೂ ಪ್ರೋತ್ಸಾಹ ನೀಡುತ್ತಿವೆ. ಸ್ವಚ್ಛ ಭಾರತ ಮಿಷನ್‌ನಡಿಯಲ್ಲಿ ಕೂಡ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಬಯೋ ಗ್ಯಾಸ್ ಪೂರ್ಣಪ್ರಮಾಣದಲ್ಲಿ ಅಳವಡಿಸಿದರೆ ವಿದೇಶಿ LPG ಅವಲಂಬನೆ ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ.















.
.
.
.
.
.
.
.
.
.
