Share this news

ನವದೆಹಲಿ: ಜಗದೀಪ್ ಧನಕರ್  ಅವರು ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಬಳಿಕ ಮುಂದಿನ ಉಪರಾಷ್ಟ್ರಪತಿ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ರಾಜ್ಯಸಭೆಯಲ್ಲಿ ಎನ್​ಡಿಎ ಬಹುಮತ ಹೊಂದಿದೆ. ಜಗದೀಪ್ ಧನಕರ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹುದ್ದೆಗೆ 67(ಎ) ವಿಧಿಯನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸದೆ ತಮ್ಮ ಹುದ್ದೆಯನ್ನು ತೊರೆಯಲು ನಿರ್ಧರಿಸಿದ ಮೂರನೇ ಉಪ ರಾಷ್ಟ್ರಪತಿ ಇವರಾಗಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿದ್ದ ಧನಕರ್, ಉಪರಾಷ್ಟ್ರಪತಿಯಾಗುವ ಮೊದಲು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಿತ್ತು. ಧನಕರ್ ಅವರು ಭಾರತದ 14ನೇ ಉಪರಾಷ್ಟ್ರಪತಿ. ಅವರ ಅಧಿಕಾರಾವಧಿ 2027ರ ಆಗಸ್ಟ್ 10ರವರೆಗೆ ಇತ್ತು. ಆದರೆ, ಆರೋಗ್ಯ ಸಮಸ್ಯೆಯಿಂದ ಅಧಿಕಾರವಧಿ ಮುಕ್ತಾಯಕ್ಕೂ ಮುನ್ನವೇ ರಾಜೀನಾಮೆ ಸಲ್ಲಿಸಿದ್ದಾರೆ.

ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಅವರು ರಾಜೀನಾಮೆ ನೀಡಿರುವುದರಿಂದ, ರಾಜ್ಯಸಭೆಯ ಅಧ್ಯಕ್ಷರ ಹುದ್ದೆ ತೆರವಾಗಿದೆ. ಸಾಮಾನ್ಯವಾಗಿ ಉಪರಾಷ್ಟ್ರಪತಿಯವರ ಹುದ್ದೆ ಖಾಲಿಯಾದಾಗ, ರಾಜ್ಯಸಭೆಯ ಉಪ ಸಭಾಪತಿಯವರು ಅಧ್ಯಕ್ಷರ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ಒಂದು ವೇಳೆ ಉಪ ಸಭಾಪತಿಗಳು ಸಹ ಲಭ್ಯವಿಲ್ಲದಿದ್ದರೆ, ರಾಷ್ಟ್ರಪತಿಗಳು ರಾಜ್ಯಸಭೆಯ ಯಾವುದೇ ಸದಸ್ಯರನ್ನು ರಾಜ್ಯಸಭೆಯ ಅಧ್ಯಕ್ಷರ ಕರ್ತವ್ಯಗಳನ್ನು ನಿರ್ವಹಿಸಲು ನೇಮಿಸಬಹುದಾಗಿದೆ.

 

Leave a Reply

Your email address will not be published. Required fields are marked *