ಬೆಂಗಳೂರು: ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಫಾಸ್ಟ್ ಫುಡ್ ಗಳಲ್ಲಿ ಬಳಕೆಯಾಗುತ್ತಿರುವ ಗೋಬಿ ಮಂಚೂರಿಯಲ್ಲಿ ಬಳಸುತ್ತಿರುವ ಕ್ಯಾನ್ಸರ್ ಕಾರಕ ರಾಸಾಯನಿಕ ಬಣ್ಣವನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಬೆನ್ನಲ್ಲೇ ಇದೀಗ ಕಬಾಬ್ ಹಾಗೂ ಇತರೇ ಫಾಸ್ಟ್ ಫೂಡ್ ಗಳಲ್ಲಿ ಬಣ್ಣಗಳನ್ನು ಬಳಸದಂತೆ ಸರ್ಕಾರ ಖಡಕ್ ಆದೇಶ ಹೊರಡಿಸಿದೆ.
ಈ ಕುರಿರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಕಬಾಬ್ ಹಾಗೂ ಫಾಸ್ಟ್ ಫುಡ್ ಗಳಲ್ಲಿ ರಾಸಾಯನಿಕಮಿಶ್ರಿತ ಬಣ್ಣಗಳನ್ನು ಬಳಸುವ ಕುರಿತು ಸಾಕಷ್ಟು ದೂರುಗಳು ಬರುತ್ತಿದ್ದು ಇದರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ. ಇದಲ್ಲದೇ ಫಾಸ್ಟ್ಫುಡ್ ತಯಾರಿಕೆಯಲ್ಲಿ ಆಹಾರದ ರುಚಿ ಹೆಚ್ಚಿಸಲು ಅಜಿನಮೋಟೋ(ಟೇಸ್ಟಿಂಗ್ ಪೌಡರ್) ಹಾಗೂ ವಿನಿಗರ್ ಬಳಕೆಯ ವಿರುದ್ಧವೂ ಆರೋಗ್ಯ ಇಲಾಖೆ ಖಡಕ್ ಸೂಚನೆ ನೀಡಿದೆ.
ಬೀದಿಬದಿ ವ್ಯಾಪಾರಿಗಳು ತಮ್ಮ ಲಾಭಕ್ಕಾಗಿ ಆಹಾರದ ರುಚಿ ಹೆಚ್ಚಿಸಲು ಅಪಾಯಕಾರಿ ರಾಸಾಯನಿಕ ಬಳಸುವ ಮೂಲಕ ಜನರ ಜೀವದ ಜತೆ ಚೆಲ್ಲಾಟವಾಡುತ್ತಿರುವ ಕುರಿತು ದೂರುಗಳು ಕೇಳಿಬಂದಿದ್ದು ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು ಕೃತಕ ಬಣ್ಣ ಹಾಗೂ ರಾಸಾಯನಿಕಗಳನ್ನು ಬಳಸಿದ್ರೆ ಕಠಿಣ ಜೈಲು ಶಿಕ್ಷೆ ವಿಧಿಸುವುದಾಗಿ ಸಚಿವ ಗುಂಡೂರಾವ್ ಎಚ್ಚರಿಸಿದ್ದಾರೆ
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.