ಮಂಗಳೂರು :ಮಂಗಳೂರಿನ ಕಾರಾಗೃಹದೊಳಗೆ ರಸ್ತೆಯಿಂದ ನಿಷೇಧಿತ ವಸ್ತುಗಳಿರುವ ಪೊಟ್ಟಣ ಎಸೆದ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿಗಳು ಗಾಂಜಾ ಎಸೆದ ಕೃತ್ಯದ ವಿಡಿಯೋ ಲಭ್ಯವಾಗಿದ್ದರೂ ಕೂಡ ಅವರು ಬಂದಿದ್ದ ದ್ವಿಚಕ್ರ ವಾಹನದಲ್ಲಿ ನಂಬರ್ ಪ್ಲೇಟ್ ಇರಲಿಲ್ಲ ಹಾಗಾಗಿ ಪೊಲೀಸರಿಗೆ ಆರೋಪಿಗಳ ಪತ್ತೆ ಕಾರ್ಯ ಸವಾಲಾಗಿದೆ.
ಗಾಂಜಾ ಎಸೆದ ಬಳಿಕ ಜೈಲಿನೊಳಗಿದ್ದ ವಿಚಾರಣಾಧೀನ ಕೈದಿ ಆ ನಿಷೇಧಿತ ವಸ್ತುಗಳಿರುವ ಪ್ಯಾಕೆಟ್ ಅನ್ನು ಹೆಕ್ಕಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆತನ ವಿಚಾರಣೆಯಿಂದ ಇಬ್ಬರು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ.
ಭಾನುವಾರ ಇಬ್ಬರು ಯುವಕರು ಸ್ಕೂಟರ್ ನಲ್ಲಿ ಬಂದು ರಸ್ತೆಯಿಂದ ಕಾರಾಗೃಹದೊಳಗೆ ಪೊಟ್ಟಣವನ್ನು ಎಸೆದು ಪರಾರಿಯಾಗಿದ್ದರು.
ಪೊಟ್ಟಣ ಎಸೆದ ಘಟನೆಯ ಹಿನ್ನೆಲೆಯಲ್ಲಿ ಕಾರ್ಯಗ್ರಹದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ ಮುಖ್ಯವಾಗಿ ಪೊಟ್ಟನ ಎಸೆದ ಪರಿಸರದಲ್ಲಿ ದಿನದ 24 ಗಂಟೆಯೂ ಹೆಚ್ಚುವರಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಯೋಚಿಸಿ ನಿಗಾ ವಹಿಸಲಾಗುತ್ತಿದೆ.
