Share this news

ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬAಧಪಟ್ಟAತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ತನಗೆ ಬುರುಡೆ ಕೊಟ್ಟಿರುವುದು ಜಯಂತ್ ಎಂದು ಚಿನ್ನಯ್ಯ ಎಸ್‌ಐಟಿ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಎಸ್‌ಐಟಿ ಅಧಿಕಾರಿಗಳು ಚಿನ್ನಯ್ಯ ಕೋರ್ಟ್ ಗೆ ತಂದಿದ್ದ ಬುರುಡೆ ಮೂಲ ಕೆದಕುತ್ತಿದ್ದು, ಈ ಒಂದು ಬುರುಡೆ ಎಲ್ಲಿಂದ ಬಂತು? ಹೇಗೆ ಬಂತು? ಯಾರು ಮೊದಲು ಈ ಬುರುಡೆ ಕಥೆ ಕಟ್ಟಿದ್ದಾರೆ ಎನ್ನುವುದನ್ನು ತನಿಖೆ ನಡೆಸುತ್ತಿದ್ದು ವಿಚಾರಣೆ ವೇಳೆ ಚಿನ್ನಯ್ಯ ಈ ವಿಚಾರ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ನೂರಾರು ಶವ ಹೂತಿದ್ದೇನೆ. ಹೂತಿರುವ ಜಾಗ ತೋರಿಸುತ್ತೇನೆ ಎಂದು ಕೈಯಲ್ಲೊಂದು ಬುರುಡೆ ಹಿಡಿದುಕೊಂಡು ಬಂದಿದ್ದ ಚಿನ್ನಯ್ಯ, ಬುರುಡೆ ಬಿಟ್ಟಿದ್ದ. ಆದರೆ ಬುರುಡೆ ಪ್ಲ್ಯಾನ್ ಬಗ್ಗೆ ಜಯಂತ್ ಮನೆಯಲ್ಲೇ ರಿಹರ್ಸಲ್ ನಡೆದಿತ್ತು ಎನ್ನಲಾಗಿದೆ. ಜಯಂತ್ ಮನೆಯಲ್ಲೇ ಚಿನ್ನಯ್ಯನ ಹೇಳಿಕೆಯನ್ನು ಮೊದಲು ವಿಡಿಯೋ ಮಾಡಲಾಗಿತ್ತಂತೆ. ವಿಡಿಯೋ ಹೇಳಿಕೆ ಪಡೆದು, ನಂತರ ಅದನ್ನ ಗಿರೀಶ್ ಮಟ್ಟಣ್ಣನವರ್ ಸೂಚನೆಯಂತೆ ಜಯಂತ್ ಡಿಲೀಟ್ ಮಾಡಿದ್ದ ಎನ್ನಲಾಗಿದೆ. ಈ ವಿಡಿಯೋಗಾಗಿ ಪೊಲೀಸರು ವಶಪಡಿಸಿಕೊಂಡಿರುವ ಫೋನ್‌ಗಳನ್ನ ರಿಟ್ರೀವ್ ಮಾಡುತ್ತಿದ್ದಾರೆ.

ನಾನು ಬುರುಡೆ ತಂದಿದ್ದು ಸೇಲಂನಿಂದಲೂ ಅಲ್ಲ ಮಂಡ್ಯದಿಂದಲೂ ಅಲ್ಲ. ಜಯಂತ್ ಮನೆಯಲ್ಲಿ ನನಗೆ ಬುರುಡೆ ಮತ್ತು ಮೂಳೆ ಕೊಟ್ಟರು ಜಯಂತ್ ಮನೆಯಲ್ಲಿಯೇ ನಾನು ಮೊದಲು ಬುರುಡೆ ನೋಡಿದ್ದು ಎಂದು ಚಿನ್ನಯ್ಯ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ. ಟ್ರಾವೆಲ್ ಹಿಸ್ಟರಿ ಸಮೇತ ಚಿನ್ನಯ ಹೇಳಿಕೆ ನೀಡಿದ್ದು, ತಮಿಳುನಾಡಿನಿಂದ ನೇರವಾಗಿ ಬೆಂಗಳೂರಿಗೆ ಭೇಟಿ ನೀಡಿದ್ದೇನೆ. ಬಾಗಲಗುಂಟೆಗೆ ಪ್ರಯಾಣ ಬೆಳೆಸಿದ್ದೇನೆ ಮೂರು ದಿನ ಜಯಂತ್ ಮನೆಯಲ್ಲಿ ನಾನು ಉಳಿದಿದ್ದೇನೆ. ಮನೆ ಹಾಗೂ ಟೆರೇಸ್ ಮೇಲೆ ಕುಳಿತು ಮಾತುಕತೆ ನಡೆಸಿದ್ದೇವೆ. ಜಯಂತ್ ಮತ್ತು ಚಿನ್ನಯ್ಯ ಸೇರಿದಂತೆ ಹಲವರು ಚರ್ಚಿಸಲಾಗಿದೆ. ಈ ವೇಳೆ ನನಗೆ ಜಯಂತ ಮನೆಯಲ್ಲಿ ಬುರುಡೆ ಕೊಟ್ಟಿದ್ದಾರೆ ಎಂದು ಚಿನ್ನಯ್ಯ ಹೇಳಿಕೆ ನೀಡಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ.

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *