
ಹೆಬ್ರಿ,ಏ.07 : ರಾಜ್ಯದಲ್ಲಿ ಹಲವು ಪ್ರಾದೇಶಿಕ ಪಕ್ಷಗಳ ಸ್ಥಾಪನೆಯಾಗಿದ್ದರೂ ಹೋರಾಡಿ ಉಳಿದಿರುವುದು ಜೆಡಿಎಸ್ ಪಕ್ಷ ಮಾತ್ರ. ಹಿರಿಯರಾದ ದೇವೆಗೌಡರ ಶ್ರಮ, ಸ್ಪಷ್ಟ ನಿಲುವು, ಜನಪರ ಹೋರಾಟ, ಕಲ್ಯಾಣ ಯೋಜನೆಗಳ ಕೊಡುಗೆ, ಕೃಷಿಕರಿಗೆ ಹಲವು ಶಾಶ್ವತ ಯೋಜನೆ ಮತ್ತು ಹಿಂದುಳಿದ ವರ್ಗಗಳ ಜೊತೆಗೆ ನಿಂತಿರುವುದರಿಂದಲೇ 2 ರಾಷ್ಟ್ರೀಯ ಪಕ್ಷದ ಮಧ್ಯೆ ಇಂದು ಜೆಡಿಎಸ್ ರಜತ ಸಂಭ್ರಮವನ್ನು ಆಚರಿಸುತ್ತಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾದ ಮಾಜಿ ಶಾಸಕ ಜೆ.ಕೆ.ಕೃಷ್ಣ ರೆಡ್ಡಿ ಹೇಳಿದರು.
ಅವರು ಹೆಬ್ರಿಯ ಮದಗ ಪರಿಮಳ ಲೇಔಟ್ ನಲ್ಲಿ ಜೆಡಿಎಸ್ ಕಾರ್ಕಳ ವಿಧಾನಸಭಾ ಕ್ಷೇತ್ರದ ವತಿಯಿಂದ ಕ್ಷೇತ್ರಾಧ್ಯಕ್ಷ ಕುಚ್ಚೂರು ಶ್ರೀಕಾಂತ್ ಪೂಜಾರಿ ನೇತ್ರತ್ವದಲ್ಲಿ ನಡೆದ ಜೆಡಿಎಸ್ – 25 ರಜತ ಮಹೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮ ವಾಸ್ತವ್ಯವನ್ನು ನಾಡಿಗೆ ಪರಿಚಯಿಸಿ ಸ್ಥಳದಲ್ಲೇ ಜನರ ಕಷ್ಟ ಆಲಿಸಿ ಪರಿಹಾರ ಕಂಡುಕೊಳ್ಳುವ ಮೂಲಕ ಕುಮಾರಸ್ವಾಮಿಯವರು ಜನಮನ ಗೆದ್ದಿದ್ದಾರೆ. ಅಂತಹ ಜೆಡಿಎಸ್ ಪಕ್ಷವನ್ನು ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದಲ್ಲಿ ಹೋರಾಟಗಾರ ಯುವ ನಾಯಕ ಕುಚ್ಚೂರು ಶ್ರೀಕಾಂತ್ ಪೂಜಾರಿ ಕಟ್ಟುತ್ತಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭ ಹೆಬ್ರಿಯ ಪೌರ ಕಾರ್ಮಿಕರಾದ ಬಾಡ್ಡೆ ಮತ್ತು ಹರೀಶ ಬಡಾಗುಡ್ಡೆ ಹಾಗೂ ಕಾಮಿಡಿ ಕಿಲಾಡಿಗಳು ವಿಜೇತರಾದ ಮಡೇನೂರು ಮನು ಬೆಂಗಳೂರು ಅವರನ್ನು ಸನ್ಮಾನಿಸಲಾಯಿತು.
ಕಾಮಿಡಿ ಕಿಲಾಡಿಗಳು ವಿಜೇತರಾದ ಮಡೇನೂರು ಮನು ಬೆಂಗಳೂರು ಅವರ ತಂಡದಿಂದ ರಸಸಂಜೆ ಕಾರ್ಯಕ್ರಮ ನಡೆಯಿತು.ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಜೆಡಿಎಸ್ ಉತ್ತರಕನ್ನಡ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ್ ಸೋನಿ, ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ ವಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ವಿವಿಧ ಪ್ರಮುಖರಾದ ಯೋಗೀಶ ಶೆಟ್ಟಿ ಜಕ್ಕೂರು, ಉದಯ ಶೆಟ್ಟಿ ಕಾಪು, ರಮೇಶ್ ಕುಂದಾಪುರ, ಪ್ರಕಾಶ ಶೆಟ್ಟಿ ಬೆಳ್ಳಂಪಳ್ಳಿ, ಸುರೇಶ್ ಬಜಗೋಳಿ, ದೇವರಾಜ್ ಕಾಪು, ಜೀವನ್ ಕೃಷ್ಣ, ಹರೀಶ್ ಮುದ್ರಾಡಿ ಮುಂತಾದವರು ಉಪಸ್ಥಿತರಿದ್ದರು. ಯೋಗೀಶ ಶೆಟ್ಟಿ ಸ್ವಾಗತಿಸಿ, ಕುಚ್ಚೂರು ಶ್ರೀಕಾಂತ್ ಪೂಜಾರಿ ವಂದಿಸಿ, ದೀಕ್ಷಿತ್ ಪೆರ್ಡೂರು ನಿರೂಪಿಸಿದರು.
















.
.
.
.
.
.
.
.
.
.
