ಕಾರ್ಕಳ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಿಂದಿನಿಂದ ಬಂದ ಬೈಕ್ ಡಿಕ್ಕಿಯಾದ ಪರಿಣಾಮ ಪಾದಚಾರಿ ವ್ಯಕ್ತಿ ರವಿ(43) ಎಂಬವರು ಗಾಯಗೊಂಡಿದ್ದಾರೆ.
ರವಿ ಎಂಬವರು ಕುಕ್ಕುಂದೂರು ಪಾದೆಯಲ್ಲಿ ಸೈಜ್ ಕಲ್ಲು ತೆಗೆಯುವ ಕೆಲಸ ಮಾಡಿಕೊಂಡಿದ್ದು ಭಾನುವಾರ ಸಂಜೆ ಕೆಲಸ ಮುಗಿಸಿ ಜಾರ್ಕಳದಿಂದ ತನ್ನ ಮನೆಯಾದ ಎರ್ಲಪಾಡಿಯ ಭಟ್ರಪಾದೆ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗವಾಗಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ಸವಾರ ಅರ್ಜುನ್ ನಿಯಂತ್ರಣತಪ್ಪಿ ರವಿ ಎಂಬವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ರಭಸಕ್ಕೆ ರವಿ ಹಾಗೂ ಸವಾರ ಅರ್ಜುನ್ ಎಂಬಾತನಿಗೂ ಗಾಯಗಳಾಗಿವೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ