ಹೆಬ್ರಿ : ಕಬ್ಬಿನಾಲೆ ಮೇಲ್ಮಠ ಶ್ರೀ ಲಕ್ಷ್ಮೀನಾರಾಯಣ ದೇವರ ಸನ್ನಿಧಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಸಂಭ್ರಮ, ಸಡಗರದಿಂದ ನಡೆಯಿತು.
ಕೊಡಮಣಿತ್ತಾಯ ದೈವ ಸನ್ನಿಧಿಯಲ್ಲಿ ಮುದ್ರೆ ಪೂಜೆ, ಸಂತರ್ಪಣೆ, ಇಟ್ಟು ಗುಂಡಿ ಉಮಾಮಹೇಶ್ವರ ಸನ್ನಿಧಿಯಲ್ಲಿ ವಾರ್ಷಿಕ ಉತ್ಸವಾದಿಗಳು, ಶ್ರೀ ಲಕ್ಷ್ಮೀ ನಾರಾಯಣ ದೇವರ ಸನ್ನಿಧಿಯಲ್ಲಿ ನವಕಪ್ರದಾನ, ದೀಪಾರಾಧನೆ, ಮಹಾರಂಗಪೂಜೆ, ಸುತ್ತುಬಲಿ, ವೇದೋಕ್ತ ಢಕ್ಕೆ ಬಲಿ, ಹರಕೆ ಉತ್ಸವ, ಕಾಲಾವಧಿ ಉತ್ಸವ ನಡೆಯಿತು.
ದೇವಳದ ಪ್ರಧಾನ ಅರ್ಚಕ ರಾಮಚಂದ್ರ ಭಟ್, ವಿದ್ವಾನ್ ಸುಪ್ರಸನ್ನ ಭಟ್, ಬ್ರಹ್ಮವಾಹಕ ಕಬ್ಬಿನಾಲೆ ರಾಮಚಂದ್ರ ಭಟ್ ವರಂಗ , ಶಿವರಾಮ ಹೆಬ್ಬಾರ್, ದೇವರ ಪಾತ್ರಿ ಶಂಕರನಾರಾಯಣ ಹೆಬ್ಬಾರ್, ವ್ಯವಸ್ಥಾಪಕ ಮೇಲ್ ಸುಳಿಗೋಡು ಪರಮೇಶ್ವರ ಹೆಬ್ಬಾರ್, ಕೆಳಾಬೆಟ್ಟು ಸುಬ್ರಹ್ಮಣ್ಯ ಹೆಬ್ಬಾರ್, ಲ್ಯಾಂಡ್ ಟ್ರೇಡ್ ಪ್ರವರ್ತಕ ಹಾಗೂ ಸೇವಾಕರ್ತ ಶ್ರೀನಾಥ್ ಹೆಬ್ಬಾರ್, ಅನಂತ ಹೆಬ್ಬಾರ್, ಸುಳಿಗೋಡು, ಕುಚ್ಚೂರು, ಕುಡುಮಣ್ಣು ಕುಟುಂಬಸ್ಥರು, ಮತ್ತಿತರರು ಸಹಕರಿಸಿದರು.