ಕಡಂದಲೆ: ನೀರಿನ ಪೈಪ್ಲೈನ್ಗೆಂದು ರಸ್ತೆ ಬಳಿ ಅಗೆದ ಬಳಿಕ, ಅದನ್ನು ಸರಿಯಾಗಿ ನಿರ್ವಹಿಸದ ಕಾರಣ ಕೆಂಪು ಕಲ್ಲು ಸಾಗಿಸುವ ಟಿಪ್ಪರ್ ಒಂದು ಇಂದು ಕಡಂದಲೆ ಗ್ರಾಮದ ಪೂಪಾಡಿಕಲ್ಲು ಬಳಿ ಮಣ್ಣಿನಲ್ಲಿ ಹೂತು ಹೋದ ಘಟನೆ ನಡೆದಿದೆ. ಅವಘಡದಲ್ಲಿ ಟ್ರಕ್ನಲ್ಲಿದ್ದ ಚಾಲಕ, ಸಿಬ್ಬಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಮುಗ್ರೋಡಿ ಕನ್ಸ್ಟ್ರಕ್ಷನ್ರವರ ಕಳಪೆ ಕಾಮಗಾರಿ ಈ ಅವಘಡಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರಾದ ಅವಿನಾಶ್ ಅವರ ಕ್ರೇನ್ ಬಳಸಿ ಟ್ರಕ್ ಅನ್ನು ಮೇಲಕ್ಕೆತ್ತಲಾಯಿತು ಎಂದು ತಿಳಿದುಬಂದಿದೆ.
ಮುಗ್ರೋಡಿ ಕನ್ಸ್ಟ್ರಕ್ಷನ್ ಅವರ ಕಳಪೆ ಕಾಮಗಾರಿ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತವಾಗಿದ್ದು, ಅವೈಜ್ಞಾನಿಕ ಕಾಮಗಾರಿ ನಡೆಸುವ ಕಂಪನಿಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.