ಕಾರ್ಕಳ: ಕಡ್ತಲ ಗ್ರಾಮ ಪಂಚಾಯತಿ ಹಾಗೂ ಜನನಿ ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ಬ್ರಹ್ಮಾವರ ರುಡ್’ಸೆಟ್ ವತಿಯಿಂದ ಮೆಹಂದಿ,ಹೇರ್ ಸ್ಟೈಲ್,ಸ್ಯಾರಿ ಡ್ರಾಪಿಂಗ್ ಮತ್ತು ಸ್ಯಾರಿ ಕುಚ್ಚು ಹಾಕುವ ಒಂದು ವಾರದ ಉದ್ಯಮ ಶೀಲತಾ ತರಬೇತಿ ಕಾರ್ಯಾಗಾರವು ಕಡ್ತಲ ಗ್ರಾಮ ಪಂಚಾಯತಿ ಸುವರ್ಣ ಸೌಧದಲ್ಲಿ ನಡೆಯಿತು.
ಕಡ್ತಲ ಗ್ರಾಮ ಪಂಚಾಯತಿ ಅಧ್ಯಕ್ಷ ಸುಕೇಶ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿ ಗಳಾಗಿ ರುಡ್ ಸೆಟ್ ಸಂಸ್ಥೆ ಯ ನಿರ್ದೇಶಕ ಡಾ.ಬೊಮ್ಮಯ್ಯ, ಉಪನ್ಯಾಸಕ ಸಂತೋಷ್ ಶೆಟ್ಟಿ, ತರಬೇತುದಾರರಾದ ರಾಜಲಕ್ಷ್ಮೀ
ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಚಂದ್ರಿಕಾ ಕಿಣಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೇವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತಿ ಸುರೇಖಾ, ಪಂಚಾಯತ್ ಉಪಾಧ್ಯಕ್ಷೆ ಲಕ್ಷ್ಮೀ ಹಾಗೂ ಶಿಬಿರಾರ್ಥಿ ಗಳು, ಪಂಚಾಯತ್ ಸದಸ್ಯರು, ಪಂಚಾಯತ್ ಸಿಬ್ಬಂದಿ ವರ್ಗ, ಸಂಜೀವಿನಿ ಒಕ್ಕೂಟ ದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸುಮಾರು 45 ಮಹಿಳಾ ಶಿಬಿರಾರ್ಥಿ ಗಳು ಭಾಗವಹಿಸಿ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡು ಹಾಗೂ ತರಬೇತಿ ಯ ಬಗ್ಗೆ ಅನಿಸಿಕೆ ಗಳನ್ನು ಹಂಚಿಕೊಂಡರು. ಸಮಾರೋಪ ಸಮಾರಂಭ ದ ಪ್ರಸ್ತಾವಿಕ ಮಾತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಖಾ ರವರು ಮಾತನಾಡಿದರು. ಶಿಬಿರಾರ್ಥಿ ಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಮಾಲತಿ ಕುಲಾಲ್ ಸ್ವಾಗತಿಸಿ,ಕುಮಾರಿ ಚೈತ್ರಾ ವಂದಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.