ಅಜೆಕಾರು: ಕಡ್ತಲದ ತಿರುಮಲ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಯೊಗೀಶ ಮಲ್ಯ ಎಂಬವರಿಗೆ ಪುಣೆಯ ಡ್ರೈ ಫ್ರೂಟ್ಸ್ ಸಂಸ್ಥೆಯ ಮಾಲಕ ಬರೋಬ್ಬರಿ 11 ಲಕ್ಷಕ್ಕೂ ಮಿಕ್ಕಿ ಹಣ ವಂಚಿಸಿದ್ದಾನೆ ಎಂದು ಯೋಗೀಶ ಮಲ್ಯ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಯೋಗೀಶ್ ಮಲ್ಯ ಪುಣೆಯ ಮಹಾದೇವ ನಗರದ ಗೊಬಿಂದ್ ಡ್ರೈ ಪ್ರುಟ್ಸ್ ಕಂಪನಿ ಮಾಲಕ ದಲ್ಜೀತ್ ಸಿಂಗ್ ಗೆ ಕಳೆದ 2021ರ ಡಿ.21 ರಂದು 22,11,300 ರೂಪಾಯಿ ಮೌಲ್ಯದ 18 ಸಾವಿರ ಕೆ.ಜಿ ಕಚ್ಚಾ ಗೊಡಂಬಿಯನ್ನು ಕಂಟೈನರ್ ಮೂಲಕ ರವಾನಿಸಿದ್ದರು.ಇದಕ್ಕೆ ಪ್ರತಿಯಾಗಿ ದಲ್ಜಿತ್ ಸಿಂಗ್ ಎರಡು ಕಂತುಗಳಲ್ಲಿ 10.50 ಲಕ್ಷ ಹಣ ಪಾವತಿಸಿದ್ದು,ಬಾಕಿ 11,46,400 ಹಣವನ್ನು ಪಾವತಿಸದೇ ವಂಚಿಸಿದ್ದಾರೆ ಎಂದು ಯೋಗೀಶ್ ಮಲ್ಯ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

