ಅಜೆಕಾರು, ಸೆ 09: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಕಡ್ತಲ ಗ್ರಾಮದ ಚೆನ್ನಿಬೆಟ್ಟು ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದ ಜಾರ್ಖಂಡ್ ಮೂಲದ ಕೂಲಿ ಕಾರ್ಮಿಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಾರ್ಖಂಡ್ ಮೂಲದ ಸುಜೇಕ ರಾಮ್ (19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಆತ ಕಡ್ತಲ ಗ್ರಾಮದ ಚೆನ್ನಿ ಬೆಟ್ಟು ಎಂಬಲ್ಲಿನ ಕುರಿಯಕೋಸ್ ಎಂಬುವರ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದು ಈತನು ಆ. 15 ರಂದು ಮಧ್ಯಾಹ್ನ ತನ್ನ ಚೆನ್ನಿಬೆಟ್ಟುವಿನ ರೂಮ್ ನಲ್ಲಿ ಯಾವುದೋ ಕೀಟ ನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ. ಆತನನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ನಂತರ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸಗೆ ಸ್ಪಂದಿಸದೆ ಸುಜೇಕ ರಾಮ್ ಸೆ. 7 ರಂದು ಮೃತಪಟ್ಟಿದ್ದಾನೆ.
ಕಳೆದ ಆ.15 ರಂದು ಮೊಬೈಲ್ ಮೂಲಕ ಬಂದ ಮೆಸೇಜ್ ಗೆ ಪ್ರತಿಕ್ರಿಯೆ ನೀಡಿ ರೂ. 7,000 ನಗದು ಕಳೆದುಕೊಂಡಿದ್ದು, ಇದೇ ಕಾರಣಕ್ಕೆ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೃತರ ಅಣ್ಣ ದೂರು ನೀಡಿದ್ದು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.