Share this news

ಅಜೆಕಾರು: ಕಡ್ತಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ಪ್ರಾಯೋಜಕತ್ವದಲ್ಲಿ ನೋಟ್ ಪುಸ್ತಕ ವಿತರಣಾ ಸಮಾರಂಭ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಪ್ರತಿಯೊಂದು ವರ್ಷವೂ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸುವ ಹಳೆ ವಿದ್ಯಾರ್ಥಿ ಹಾಗೂ ದಾನಿಯಾಗಿ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ (ಪ್ರಕೃತಿ ನಿಲಯ, ಕಡ್ತಲ) ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಹೆಗ್ಡೆ, ವಿಶ್ವನಾಥ ಪೂಜಾರಿಯವರ ಮಾತೃಶ್ರಿಯರಾದ ಗುಲಾಬಿ ಪೂಜಾರ್ತಿ, ಹಿರಿಯ ಸಮುದಾಯ ಮುಖಂಡ ಸಂಜೀವ ಪೂಜಾರಿ ಕಂಟೆಬೆಟ್ಟು, ಕಾರ್ಕಳ ಉಪ ವಲಯ ಅರಣ್ಯಾಧಿಕಾರಿ ಕರುಣಾಕರ ಜೆ, ಎಸ್‌ಡಿಎಂಸಿ ಅಧ್ಯಕ್ಷ ಸುಧಾಕರ ಕುಲಾಲ್, ಮಾಜಿ ಅಧ್ಯಕ್ಷೆ ಶೋಭಾ ಶೆಟ್ಟಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ವಸಂತಿ ಹಾಗೂ ಅನೇಕ ಸದಸ್ಯರು, ಪೋಷಕರು, ಮಕ್ಕಳೊಂದಿಗೆ ಶಿಕ್ಷಕ ವೃಂದ ಹಾಜರಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಸ್ವಾಗತಿಸಿ, ಕಸ್ತೂರಿ ಧನ್ಯವಾದವಿತ್ತರು.ಶಿಕ್ಷಕಿ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು

 

 

 

 

 

 

 

Leave a Reply

Your email address will not be published. Required fields are marked *