ಕಾರ್ಕಳ:ರಿಕ್ಷಾ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ತಂದೆ ಹಾಗೂ ಇಬ್ಬರು ಮಕ್ಕಳಿಗೆ ಗಾಯಗಳಾಗಿವೆ.
ರಿಕ್ಷಾ ಚಾಲಕ ಕಾಂತಾವರ ಬೇಲಾಡಿಯ ಸತೀಶ್ ಹಾಗೂ ಇಬ್ಬರು ಮಕ್ಕಳಾದ ನಿಮಿಷ್ ನಿಧಿಶಾ ಎಂಬವರು ಗಾಯಗೊಂಡಿದ್ದಾರೆ.
ಸತೀಶ್ ಬುಧವಾರ ಬೆಳಗ್ಗೆ 9.45ರ ಸುಮಾರಿಗೆ ಕೇಪ್ಲಾಜೆ ಕಡೆಯಿಂದ ಬೇಲಾಡಿ ಕಡೆಗೆ ತನ್ನ ರಿಕ್ಷಾದಲ್ಲಿ ಮಕ್ಕಳನ್ನು ಕರೆದುಕೊಂಡು ಕೇಪ್ಲಾಜೆ ಬಳಿ ಹೋಗುತ್ತಿದ್ದಾಗ ಬೇಲಾಡಿ ಕಡೆಯಿಂದ ಪಾಲಡ್ಕ ಕಡೆಗೆ ಕಾರು ಚಾಲಕ ಜಯರಾಮ ಕಾರನ್ನು ವೇಗವಾಗಿ ಚಲಾಯಿಸಿ ಸತೀಶ್ ಚಲಾಯಿಸುತ್ತಿದ್ದ ರಿಕ್ಷಾ ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳು ಜಖಂಗೊಂಡಿವೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.