Share this news

 

ಕಾರ್ಕಳ : ಕಾಂತಾವರ ಯಕ್ಷದೇಗುಲ ಸಂಸ್ಥೆಯ ವಾರ್ಷಿಕ ಯಕ್ಷೋಲ್ಲಾಸ ಕಾರ್ಯಕ್ರಮವು ಭಾನುವಾರ ಶ್ರೀ ಕ್ಷೇತ್ರ ಕಾಂತಾವರದಲ್ಲಿ ಜರಗಿತು.
ನಿರಂತರ ಹನ್ನೆರಡು ತಾಸಿನ ಯಕ್ಷೋಲ್ಲಾಸ ಸಮಾರಂಭವನ್ನು ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿವರ ಉಪಸ್ಥಿತಿಯಲ್ಲಿ ಬಾರಾಡಿ ಬೀಡು ಸಂಜಯ್ ಬಲ್ಲಾಳ್ ರವರು ಉದ್ಘಾಟಿಸಿದರು.

ಮುಖ್ಯ ಅತಿಥಿ ಕಾರ್ಕಳದ ಪ್ರೊ. ಕೃಷ್ಣ ಭಟ್ ಮಾತನಾಡಿ ಪುರಾತನ ಕಲೆಗಳೆಲ್ಲ ಇಂತಹ ಹಳ್ಳಿ ಪ್ರದೇಶದ ಸಂಘಟನೆಗಳಿAದಲೇ ಉಳಿಯುವುದು, ಬೆಳೆಯುವುದು ಎಂದು ಸಂಸ್ಥೆಯ 23 ವರ್ಷಗಳ ಯಕ್ಷಗಾನ ಚಟುವಟಿಕೆಗಳನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ತೆಂಕುತಿಟ್ಟಿನ ಇಬ್ಬರು ಹಿರಿಯ ಕಲಾವಿದರಾದ ಬಿ .ಸಿ. ರೋಡು ಶಿವರಾಮ ಜೋಗಿಯವರಿಗೆ ಬಾಯಾರು ಪ್ರಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ, ಗುಂಡಿಮಜಲು ಗೋಪಾಲ ಭಟ್ಟರಿಗೆ ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು..ಅಧ್ಯಾಪಕ ಪಶುಪತಿ ಶಾಸ್ರೀ ಸಂಸ್ಮರಣೆ ಮತ್ತು ಅಭಿನಂದನಾ ಭಾಷಣ ಮಾಡಿದರು. ಅಧ್ಯಾಪಕ ವಿಠಲ ಶೆಟ್ಟಿ ಬೇಲಾಡಿಯವರು ಶುಭಾಶಂಸನೆ ಗೈದರು.

ಕಾರ್ಕಳದ ಉದ್ಯಮಿ ವಿಜಯ ಶೆಟ್ಟಿ, ಪ್ರೊ.ಪದ್ಮನಾಭ ಗೌಡ, ಗ್ರಾಮ ಪಂ.ಅದ್ಯಕ್ಷ ರಾಜೇಶ್ ಕೋಟ್ಯಾನ್ ವೇದಿಕೆಯಲ್ಲಿದ್ದರು. ಸಂಸ್ಥೆಯ ಅದ್ಯಕ್ಷ ಶ್ರೀಪತಿ ರಾವ್, ಕೋಶಾದ್ಯಕ್ಷ ಧರ್ಮರಾಜ ಕಂಬಳಿ ಹಾಗೂ ರಮೇಶ್ ಶೆಟ್ಟಿಗಾರ್, ಲಿಂಗಪ್ಪ ದೇವಾಡಿಗ, ಸಂಜೀವ ಕೋಟ್ಯಾನ್, ಪವನಂಜಯ ಹೆಗ್ಡೆ, ಹರೀಶ್ ಬಂಗೇರಾ, ಬೆಳುವಾಯಿ ಸಂದೇಶ್ ಭಂಡಾರಿ , ಸದಾನಂದ ಶೆಟ್ಟಿ ,ಸುದರ್ಶನ್ ಆಚಾರ್ಯ, ವೆಂಕಟೇಶ್ ಕಾರ್ಕಳ, ಉದಯ್ ಪಾಟ್ಕರ್ ಹಾಗೂ ಯಕ್ಷ ಬಾಲಕರು ಉಪಸ್ಥಿತರಿದ್ದರು.

ಕಾರ್ಯಾದ್ಯಕ್ಷ ಮಹಾವೀರ ಪಾಂಡಿ ಸ್ವಾಗತಿಸಿ, ವಂದಿಸಿದರು. ಎಂ.ದೇವಾನAದ್ ಭಟ್ ಮತ್ತು ಶಿವಪ್ರಸಾದ್ ಭಟ್,ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಆಟ, ಕೂಟ ಬಯಲಾಟ ಜರಗಿತು.

 

Leave a Reply

Your email address will not be published. Required fields are marked *