ಕಾರ್ಕಳ: ಶ್ರೀಕ್ಷೇತ್ರ ಕೇಪ್ಲಾಜೆ ಶ್ರೀ ಮಹಾಮ್ಮಾಯಿ ಹಾಗೂ ಉಚ್ಚಂಗಿ ದೇವಿ ಸನ್ನಿಧಿಯಲ್ಲಿ ಎಪ್ರಿಲ್ 19 ರಿಂದ 22 ರವರೆಗೆ ಬ್ರಹ್ಮಕಲಶೋತ್ಸವ ಜರುಗಲಿದ್ದು ಈ ಪ್ರಯುಕ್ತ ಆಮಂತ್ರಣ ಪತ್ರಿಕೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಕಡಂದಲೆ ಬಿಡುಗಡೆಗೊಳಿಸಿದರು.
ಸಂಗೀತ ನಿರ್ದೇಶಕರಾದ ಪ್ರಮೋದ್ ಸಪ್ರೆ ರಚಿಸಿ, ಡಾ. ರಮೇಶ್ಚಂದ್ರ ಹಾಡಿರುವ ಕ್ಷೇತ್ರದ ಮಹಾಮ್ಮಾಯಿ ಅಮ್ಮನವರ ಸ್ತುತಿಸುವ ಭಕ್ತಿಗೀತೆಗಳ ಧ್ವನಿಸುರುಳಿಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕಾನಂದ ಶೆಟ್ಟಿ ಬೇಲಾಡಿಬಾವ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೊಹನದಾಸ ಅಡ್ಯಂತಾಯ ಬೇಲಾಡಿ, ಸಂಗೀತ ನಿರ್ದೇಶಕರಾದ ಪ್ರಮೋದ್ ಸಪ್ರೆ ಕಾಂತಾವರ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನಕಾರ್ಯದರ್ಶಿ ಪ್ರಶಾಂತ್ ಕುಮಾರ್ ಪಾಲಡ್ಕ, ಕ್ಷೇತ್ರ ಅರ್ಚಕ ಗಣೇಶ್ ಕೇಪ್ಲಾಜೆ, ವ್ಯವಸ್ಥಾಪನ ಸಮಿತಿ ಉಪಾಧ್ಯಕ್ಷರಾದ ಜಯ.ಸಿ ಅಂಚನ್ ಮೈಂದಬೆಟ್ಟು, ಕೋಶಾಧಿಕಾರಿ ರಂಜಿತ್ ಶೆಟ್ಟಿ ಪುಂಚಾಡಿ, ಬ್ರಹ್ಮಕಲಶೋತ್ಸವ ಸಮಿತಿ ಕರುಣಾಕರ ಶೆಟ್ಟಿ ಬಾರಾಡಿ, ಬ್ರಹ್ಮಕಲಶೊತ್ಸವದ ಮಾಧ್ಯಮ ಮತ್ತು ಪ್ರಚಾರ ಸಮಿತಿ ಸಂಚಾಲಕ ಶಿವಪ್ರಸಾದ್ ಶೆಟ್ಟಿ ಕೆಲ್ಲಬೆಟ್ಟು ಪರಾರಿ, ವ್ಯವಸ್ಥಾಪನಾ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.