ಉಡುಪಿ: ಈ ಹಿಂದೆ ನಡೆದ ಉಡುಪಿ ಜಿಲ್ಲೆಯ ಕಾಪು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ಬದ್ದ ಸೈದ್ಧಾಂತಿಕ ಎದುರಾಳಿ ಪಕ್ಷ ಎಸ್ ಡಿ ಪಿ ಐ ಪಕ್ಷದ ಸದಸ್ಯೆ ಸರಿತಾ ಶಿವಾನಂದ್ ರವರು ಬಿಜೆಪಿ ಸೇರ್ಪಡೆಯಾಗಿ ಪುರಸಭೆ ಉಪಾಧ್ಯಕ್ಷೆಯಾಗಿದ್ದರು. ಈ ಉಪಾಧ್ಯಕ್ಷ ಸ್ಥಾನವನ್ನು ವಿರೋಧಿಸಿ ಉಪಾಧ್ಯಕ್ಷ ಸ್ಥಾನ ರದ್ದುಗೊಳಿಸುವಂತೆ ಎಸ್ ಡಿ ಪಿ ಐ ಪಕ್ಷ “ಡಿಸಿ ಕೋರ್ಟ್” ನಲ್ಲಿ ಕಾನೂನು ಪ್ರಕರಣ ದಾಖಲಿಸಿತ್ತು ಈ ಪ್ರಕರಣದಲ್ಲಿ ಬಿಜೆಪಿಯ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದ್ದು, ಎಸ್ ಡಿ ಪಿ ಐ ಹೂಡಿದ ಪ್ರಕರಣ ನ್ಯಾಯಯುತವಾದದಲ್ಲ ಎಂದು “ಡಿಸಿ ಕೋರ್ಟು” ಪ್ರಕರಣವನ್ನು ವಜಾಗೊಳಿಸಿದೆ.
ಪ್ರತಿಷ್ಠೆಯ ಜಿದ್ದಾ ಜಿದ್ದಿನ ಕಾನೂನು ಹೋರಾಟದಲ್ಲಿ ಬಿಜೆಪಿಗೆ ಜಯವಾಗಿದ್ದು, ಈ ಪ್ರಕರಣವನ್ನು ಉಡುಪಿಯ ನ್ಯಾಯವಾದಿ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರು ಆಗಿರುವ ಸಂತೋಷ್ ಕುಮಾರ್ ಮೂಡುಬೆಳ್ಳೆ ವಾದಿಸಿದ್ದರು.