Share this news

 

 

 

ಕಾರ್ಕಳ, ಏ. 07: ಕಾರ್ಕಳ- ಹೆಬ್ರಿ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ , ಮರಾಠಿ ಕ್ರೀಡಾ ಸಂಭ್ರಮ -2026, ತುಳಜಾಭವನಿ ಟ್ರೋಫಿಯು ಏ.05 ರಂದು ಕಾರ್ಕಳ ಸ್ವರಾಜ್ ಮೈದಾನದಲ್ಲಿ ಜರುಗಿತು.

ಉಡುಪಿ ದಕ್ಷಿಣ ಕನ್ನಡ ಕಾಸರಗೋಡು ಜಿಲ್ಲೆಯ ಕ್ರಿಕೆಟ್ ಹಾಗೂ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರ ತ್ರೋಬಾಲ್ ಪಂದ್ಯಾಟ, ನಗದು ಪುರಸ್ಕಾರ,ಕಾರ್ಕಳ ಹೆಬ್ರಿ ತಾಲೂಕಿನ ಮರಾಠಿ ಸಮಾಜ ಬಾಂಧವರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ಹಾಗೂ ಅಥ್ಲೆಟಿಕ್ ಕ್ರೀಡಾಕೂಟ ನಡೆಯಿತು.

ನಾರಾಯಣ ಕೆ ನಾಯ್ಕ, ನಿವೃತ್ತ ಅಧಿಕಾರಿ ಬ್ಯಾಂಕ್ ಆಫ್ ಬರೋಡ ಕೌಡೂರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಷ್ಟ್ರಮಟ್ಟದ ವೈಟ್ ಲಿಫ್ಟಿಂಗ್ ಕ್ರೀಡಾಪಟು ಕುಮಾರಿ ಧನ್ಯಶ್ರೀ ನಾಯ್ಕ ಕ್ರೀಡಾಜ್ಯೋತಿ ಹಸ್ತಾಂತರಿಸಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶಂಕರ್ ನಾಯ್ಕ ದುರ್ಗ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ದುರ್ಗ ಶ್ರೀ ಲಕ್ಷ್ಮಿ ಅಂಬಾ ಭವಾನಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಧವ ನಾಯ್ಕ್, ಉಡುಪಿ ಜಿಲ್ಲಾ ಮರಾಠಿ ಸಮಾಜ ಸಂಘದ ಅಧ್ಯಕ್ಷರಾದ ಕೆ..ಟಿ. ನಾಯ್ಕ್, ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘ ನಿಕಟಪೂರ್ವ ಅಧ್ಯಕ್ಷರಾದ ಉಮೇಶ್ ನಾಯ್ಕ್ ಚೇರ್ಕಾಡಿ, ಮಂಗಳೂರು ಯುನಿವರ್ಸಿಟಿ ಕೊಣಾಜೆ(ನಿವೃತ್ತ) ಪ್ರೊಫೆಸರ್ ಡಾ. ದಯಾನಂದ ನಾಯ್ಕ,ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಸೀನಿಯರ್ ಡಿವಿಜಿನಲ್ ಮ್ಯಾನೇಜರ್ (ನಿವೃತ್ತ) ಶೇಷ ನಾಯ್ಕ್, ತಾಲೂಕು ಪಂಚಾಯತ್ ನ ಕಸ್ತೂರಿ ಶೇಖರ ನಾಯ್ಕ್ ಮುದ್ರಾಡಿ,ಸುಧಾಕರ್ ವಿ ನಾಯ್ಕ IRTS(ನಿವೃತ್ತ) ಉಪಾಧ್ಯಕ್ಷರು ಕಾರ್ಕಳ ಹೆಬ್ರಿತಾಲೂಕು, ಮರಾಠಿ ಸಮಾಜ ಸೇವಾ ಸಂಘ, ಸುಗಂಧಿ ನಾಯ್ಕ್ ಉಪಾಧ್ಯಕ್ಷರು ಕಾರ್ಕಳ ಹೆಬ್ರಿ ತಾಲೂಕು, ಮರಾಠಿ ಸಮಾಜ ಸೇವಾ ಸಂಘ,ನಾಗೇಂದ್ರ ನಾಯ್ಕ್ ಅಧ್ಯಕ್ಷರು ಮರಾಠಿ ಸಮಾಜ ಸಂಘ ಹೆಬ್ರಿ, ಕೃಷ್ಣ ನಾಯ್ಕ ಸ್ಥಾಪಕ ಅಧ್ಯಕ್ಷರು ಶ್ರೀ ದುರ್ಗಾಪರಮೇಶ್ವರಿ ಮರಾಠಿ ಫ್ರೆಂಡ್ಸ್ ಬಚ್ಚಪ್ಪು ಹೆಬ್ರಿ ಮೊದಲಾದವರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಶೇಖರ್ ಕಡ್ತಲ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾಕ್ಟರ್ ಆನಂದ್ ನಾಯ್ಕ ಫಿಜಿಷಿಯನ್ ಮಂಜುನಾಥ ಕ್ಲಿನಿಕ್ ಕಾರ್ಕಳ ನಿವೃತ್ತ ವೈದ್ಯಾಧಿಕಾರಿ ಜಿಲ್ಲಾಸ್ಪತ್ರೆ ಉಡುಪಿ ಉಪಸ್ಥಿತರಿದ್ದರು.
ವಿಜೇತ ಸ್ಪರ್ಧಿಗಳಿಗೆ ನಗದು ಬಹುಮಾನದ ಜೊತೆಗೆ ತುಳಜಾ ಭವಾನಿ ಟ್ರೋಫಿ- 2026 ನೀಡಿ ಗೌರವಿಸಲಾಯಿತು.ಉಡುಪಿ ದಕ್ಷಿಣ ಕನ್ನಡ ಕಾಸರಗೋಡು ಜಿಲ್ಲೆಯ 18 ಕ್ರಿಕೆಟ್ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಸಂಘದ ಸರ್ವ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.
ಸಂಘದ ಕಾರ್ಯದರ್ಶಿ ಹರೀಶ್ ಸ್ವಾಗತಿಸಿ, ಉಮೇಶ್ ಸೂಡಾ ಧನ್ಯವಾದವಿತ್ತರು.
ಪವನ್ ದುರ್ಗ ಕಾರ್ಯಕ್ರಮ ನಿರೂಪಿಸಿದರು.

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

Leave a Reply

Your email address will not be published. Required fields are marked *