
ಕಾರ್ಕಳ, ಜ.29: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವದ ನಾಲ್ಕನೇ ದಿನ ಬೆಳಗ್ಗೆಯಿಂದ ತಡರಾತ್ರಿವರೆಗೆ ಭಕ್ತರು ಭಾರೀ ಸಂಖ್ಯೆಯಲ್ಲಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದರು.ಸಂತ ಲಾರೆನ್ಸ್ ರವರ ಅತ್ಯದ್ಭುತ ಶಕ್ತಿಯುತ ಮಧ್ಯಸ್ಥಿಕೆಯಿಂದ ದೇವರಿಗೆ ತಮ್ಮ ಬೇಡಿಕೆಗಳನ್ನು ಸಮರ್ಪಿಸಿದರು.
ಮಹೋತ್ಸವದ ಎರಡು ಪ್ರಮುಖ ಬಲಿಪೂಜೆಗಳು ನಡೆದವು. ಬೆಳಿಗ್ಗೆಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ನೆರವೇರಿಸಿದರು. ಸಂಜೆಯ
ಬಲಿಪೂಜೆಯನ್ನು ಅಜ್ಮಿರ್‌ನ ನೂತನ ಧರ್ಮಾಧ್ಯಕ್ಷರಾದ ಡಾ. ಜಾನ್ ಕಾರ್ವಾಲೋ ಅವರು ನೆರವೇರಿಸಿದರು.
ತಮ್ಮ ಉಪದೇಶಗಳಲ್ಲಿ “ನಾನು ನಿಮ್ಮನ್ನು ಪ್ರೀತಿಸಿದ್ದೇನೆ” ಎಂಬ ಮಹೋತ್ಸವದ ಸಂದೇಶವನ್ನು ವಿವರಿಸಿ, ಕ್ರಿಸ್ತನ ನಿರ್ವ್ಯಾಜ ಪ್ರೀತಿಯನ್ನು ಅನುಭವಿಸಿ, ಅದನ್ನು ದೀನದಲಿತರಾದ ಸಹೋದರ ಸಹೋದರಿಯರೊಂದಿಗೆ ಹಂಚಿಕೊಳ್ಳುವ ಮೂಲಕ ವಿಸ್ತರಿಸುವ ಅಗತ್ಯವಿದೆ ಎಂದು ಒತ್ತಿಹೇಳಿದರು. ಇತರ ಬಲಿಪೂಜೆಗಳನ್ನು ವಿವಿಧ ಯಾಜಕರು ನೆರವೇರಿಸಿ ರೋಗಿಗಳ ಮೇಲೆ ಪ್ರಾರ್ಥಿಸಿದರು.
ವಂ. ಸ್ಟೀವನ್ ಫೆರ್ನಾಂಡಿಸ್ (ಐಸಿವೈಎಂ ನಿರ್ದೇಶಕರು), ವಂ. ಅನಿಲ್ ಲೋಬೋ (ಸುಂಡೇಕೆರೆ, ಚಿಕ್ಕಮಗಳೂರು), ವಂ. ಕ್ಲಾನಿ ಡಿಸೋಜಾ (ಗ್ಲಾಡ್ಸಮ್ ಹೋಮ್, ಮಂಗಳೂರು), ವಂ. ಸುನಿಲ್ ಪಿಂಟೊ (ಕಡಬ ಶಾಲೆಯ ಪ್ರಾಂಶುಪಾಲರು), ವಂ. ಪ್ರದೀಪ್ ಕಾರ್ಡೋಜಾ (ಮಿಲಾಗ್ರಿಸ್ ಕ್ಯಾಥೆಡ್ರಲ್ ಸಹಾಯಕ ಧರ್ಮಗುರು), ವಂ. ರೋಹಿತ್ ಡಿಕೋಸ್ಟಾ (ಮಂಗಳ ಜ್ಯೋತಿ ನಿರ್ದೇಶಕರು, ಮಂಗಳೂರು), ಮತ್ತು ವಂ. ರೋಹನ್ ಡಯಾಸ್, ಸಿ ಎಸ್ ಎಸ್ ಆರ್ ಸಭೆ (ಅಲಂಗಾರ್, ಮೂಡುಬಿದ್ರೆ). ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊರವರು ಮಹೋತ್ಸವದ ಯಶಸ್ವಿ ಆಚರಣೆಗೆ ಸೂಕ್ತ ವ್ಯವಸ್ಥೆ ಮಾಡಿದ ಅತ್ತೂರು ಪುಣ್ಯಕ್ಷೇತ್ರದ ಧರ್ಮಗುರುಗಳು, ಸಹಾಯಕ ಯಾಜಕರು ಮತ್ತು ಎಲ್ಲ ಭಕ್ತರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಬಸಿಲಿಕಾದ ಭವಿಷ್ಯ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳಲು ಭಕ್ತರ ಪ್ರಾರ್ಥನೆಗಳನ್ನು
ವಿನಂತಿಸಿದರು.
ಕುಂದಾಪುರ ವಿಭಾಗದ ಸಹಾಯಕ ಆಯುಕ್ತರಾದ ರಶ್ಮಿ ಅವರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಉತ್ಸವದ ಶುಭಾಶಯಗಳನ್ನು ಕೋರಿದರು.
ಇಂದು ಸಂಪ್ರದಾಯದAತೆ “ಕೃತಜ್ಞತೆಯ ತಾಯಿ”ಯಾದ ಮಾತೆ ಮೇರಿಯವರ ಗೌರವಾರ್ಥ ಬಲಿಪೂಜೆ ಅರ್ಪಿಸಲಾಗುವುದು. ಸಂಜೆ 6.00 ಗಂಟೆಯ ಬಲಿಪೂಜೆಯೊಂದಿಗೆ ಮಹೋತ್ಸವದ ಕಾರ್ಯಕ್ರಮಗಳು ಅಂತ್ಯಗೊಳ್ಳಲಿವೆ. ಆ ಬಳಿಕ “ಜಗತ್ ಜ್ಯೋತಿ” ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

.
.
.
.
