

ಕಾರ್ಕಳ: ಮನೆ ಕಟ್ಟುವ ವಿಚಾರದಲ್ಲಿ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಆರೋಪಿಸಿ ಮನೆಯ ಮಾಲೀಕ ಮೇಸ್ತ್ರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಘಟನೆ ಸೆ.4 ರಂದು ನಡೆದಿದೆ.
ಈದು ನಿವಾಸಿ ಸುರೇಶ ಅವರು ಮೇಸ್ತ್ರಿ ಕೆಲಸ ಮಾಡುತ್ತಿದ್ದು, ಮೂಡಬಿದ್ರೆಯ ಮಾರೂರು ಎಂಬಲ್ಲಿ 1 ವರ್ಷದಿಂದ ಸಂತೋಷ ಎಂಬುವವರ ಮನೆ ಕಟ್ಟುವ ಕೆಲಸ ವಹಿಸಿಕೊಂಡಿದ್ದರು. ಸಂತೋಷ ಅವರು ಮನೆ ಕಟ್ಟುವ ಸಮಯ ಒಪ್ಪಂದದ ಪ್ರಕಾರ ನಡೆದುಕೊಳ್ಳದೇ ಹೆಚ್ಚು ಬೆಲೆಯ ಗ್ರಾನೈಟ್ ಮತ್ತು ಇಲೆಕ್ಟ್ರಿಕಲ್ ಸಾಮಾಗ್ರಿಗಳನ್ನು ಹಾಕಿಸಿದ್ದರು.ಇದರಿಂದ ಹೆಚ್ಚಿನ ಹಣ ಖರ್ಚಾದ ಕಾರಣ ಸುರೇಶ್ ಒಂದು ವಾರದಿಂದ ಮನೆ ಕಾಮಗಾರಿ ಸ್ಥಗಿತಗೊಳಿಸಿದ್ದರು.
ಸೆ. 04ರಂದು ರಾತ್ರಿ ಸುರೇಶ್ ಈದು ಗ್ರಾಮದ ಹೊಸ್ಮಾರು ಸುಜಲಾ ಬಾರ್ನಲ್ಲಿ ಇದ್ದಾಗ ಮ ಸಂತೋಷ ಮತ್ತು ಕಿರಣ್ ಎಂಬವರು ಸುರೇಶ ರನ್ನು ಕಾರಿನ ಬಳಿ ಕರೆದೊಯ್ದು ಕಾಲರ್ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ. ಆ ಬಳಿಕ ಅವರನ್ನು ಮೂಡಬಿದರೆ ಪೊಲೀಸ್ ಠಾಣೆಗೆ ಕರೆದೊಯ್ದು ಅವರು ಬೆಳಿಗ್ಗೆ ಬರುವಂತೆ ತಿಳಿಸಿದಾಗ ಮತ್ತೆ ವಾಪಾಸು ಕರೆತಂದು ಬಿಟ್ಟಿದ್ದರು. ಅಲ್ಲದೇ ಕಾರಿನಲ್ಲದ್ದ ವೇಳೆಯೂ ಸಂತೊಷ್ ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿ ಸುರೇಶ್ ದೂರು ನೀಡಿದ್ದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









