Share this news

 

 

ಕಾರ್ಕಳ :ತನ್ನ ಮೂವರು ಮಕ್ಕಳೊಂದಿಗೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ತನ್ನ ಮನೆಯಿಂದ ನಾಪತ್ತೆಯಾಗಿ ಮೂರು ದಿನಗಳ ಬಳಿಕ ಮನೆಗೆ ಮರಳಿದ ಮಾನಸಿಕ ಅಸ್ವಸ್ಥ ಮಹಿಳೆ ಪ್ರಮೀಳಾ(30) ವಿಪರೀತ ಮಾತ್ರೆಗಳನ್ನು ನುಂಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಮಾಳ ಗ್ರಾಮದ ಸುಂಕದ ಕಟ್ಟೆ ನಿವಾಸಿ ಪ್ರಮೀಳಾ ತನ್ನ ತಾಯಿ ಮನೆಯಲ್ಲಿ ತಾಯಿ,ಗಂಡ ಮತ್ತು ಮೂವರು ಮಕ್ಕಳೊಂದಿಗೆ ವಾಸವಾಗಿದ್ದರು. ಅವರು ಸುಮಾರು 8 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಕಾರ್ಕಳ ನಿಟ್ಟೆಯಲ್ಲಿರುವ ಕೆ.ಎಸ್‌ ಹೆಗ್ದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರು ಕಳೆದ ಏ.23 ರಂದು ಮೂವರು ಮಕ್ಕಳೊಂದಿಗೆ ಕಾಣೆಯಾಗಿ ಏ 26 ರಂದು ಮರಳಿ ಮನೆಗೆ ಬಂದಿದ್ದರು. ಮನೆಗೆ ಬಂದ ಬಳಿಕ ಸರಿಯಾಗಿ ಊಟ ಮಾಡದೇ ಬೇಸರದಿಂದ ಇದ್ದವರು ಏ. 28ರಂದು ರಾತ್ರಿ 8:30 ರ ಸುಮಾರಿಗೆ ತನ್ನ ಮಾನಸಿಕ ಸಮಸ್ಯೆಗೆ ಕೊಟ್ಟಿರುವ ಎಲ್ಲಾ ಮಾತ್ರೆಗಳನ್ನು ಒಮ್ಮೇಲೆ ನುಂಗಿದ ಪರಿಣಾಮ ಅಸ್ವಸ್ಥಗೊಂಡವರನ್ನು ಅದೇ ದಿನ ರಾತ್ರಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್‌ ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಪ್ರಮೀಳಾ ಅವರು ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಪ್ರಮೀಳಾ ಕಾಣೆಯಾದ ಬಗ್ಗೆ ಊರಿನಲ್ಲಿ ಅಪಪ್ರಚಾರವಾದ ಹಿನ್ನೆಲೆಯಲ್ಲಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ‌ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

 

 

 

 

 

 

 

 

 

Leave a Reply

Your email address will not be published. Required fields are marked *