Share this news

ಕಾರ್ಕಳ: ಕಾರ್ಕಳದ ಬಿ ಎಸ್ಸಿ ನರ್ಸಿಂಗ್ ಕಾಲೇಜಿನಲ್ಲಿ ಕಳೆದ 4 ವರ್ಷಗಳಿಂದ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸುಸಜ್ಜಿತ ಕಟ್ಟಡ, ಸರಿಯಾದ ತರಗತಿ ಕೊಠಡಿಗಳು, ಶಾಚಾಲಯ ವ್ಯವಸ್ಥೆ, ನರ್ಸಿಂಗ್ ವ್ಯಾಸಂಗಕ್ಕೆ ಬೇಕಾದ ಅತ್ಯಗತ್ಯ ಉಪಕರಣಗಳು, ಸರಿಯಾದ ಪ್ರಯೋಗಾಲಯ, ಗ್ರಂಥಾಲಯ ವ್ಯವಸ್ಥೆ ,ಕಾಲೇಜು ನಿರ್ವಹಣೆಗೆ ಬೇಕಾದ ಗುಮಾಸ್ತರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಹಾಗೂ ಉಪನ್ಯಾಸಕರು ಇಲ್ಲದೆ ವಿದ್ಯಾರ್ಥಿಗಳು ಸಮಸ್ಯೆಗಳ ಸರಮಾಲೆಯನ್ನು ಎದುರಿಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಕೂಡಲೇ ಸರಿಯಾದ ವ್ಯವಸ್ಥೆಗಳನ್ನು ಒದಗಿಸಿ ಉತ್ತಮ ವಿಧ್ಯಾಭ್ಯಾಸಕ್ಕೆ ಅವಕಾಶ ಒದಗಿಸಬೇಕೆಂದು ಕಾರ್ಕಳ ತಾಲೂಕು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರಾಂಶುಪಾಲಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಹ ಕಾರ್ಯದರ್ಶಿಗಳಾದ ಗಣೇಶ್ ಪೂಜಾರಿ, ಉಡುಪಿ ಜಿಲ್ಲಾ ಸಂಚಾಲಕರದ ಶ್ರೇಯಸ್ ಅಂಚನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *