ಕಾರ್ಕಳ: ವಾಹನ ಓವರ್’ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಬೈಕಿಗೆ ಟಾಟಾ ಏಸ್ ವಾಹನ ಡಿಕ್ಕಿಯಾದ ಪರಿಣಾಮ ಸವಾರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಪಿಲಿಚಂಡಿ ಸ್ಥಾನದ ಬಳಿ ಸಂಭವಿಸಿದೆ.
ಬೈಕ್ ಸವಾರ ದಿಲೀಪ್ ಎಂಬವರು ಮಂಗಳವಾರ ಸಂಜೆ ಬೈಲೂರು ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದಾಗ ಕಾರ್ಕಳ ಕಡೆಯಿಂದ ಬೈಲೂರು ಕಡೆಗೆ ಟಾಟಾ ಏಸ್ ವಾಹನ ಚಾಲಕ ನಾಗರಾಜ ಎಂಬವರು ತಮ್ಮ ವಾಹನವನ್ನು ಅತಿವೇಗವಾಗಿ ಚಲಾಯಿಸಿಕೊಂಡು ಬರುತ್ತಿದ್ದಾಗ ತಿರುವಿನಲ್ಲಿ ಎದುರುಗಡೆಯಿಂದ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಬಲಬದಿಗೆ ಬಂದಾಗ ದಿಲೀಪ್ ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿಯಾಗಿದೆ.
ಈ ಅಪಘಾತದಿಂದ ಬೈಕ್ ಸವಾರ ದಿಲೀಪ್ ಅವರ ಹಣೆ, ಕೈ ಕಾಲಿಗೆ ತರಚಿದ ಗಾಯಗಳಾಗಿವೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ