Share this news

ಕಾರ್ಕಳ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ ಸಭೆಯು ಏ.8 ರಂದು ಕಾರ್ಕಳ ವಿಕಾಸದಲ್ಲಿರುವ ಚುನಾವಣಾ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಮಾತನಾಡಿ, ಏಪ್ರಿಲ್ 10 ಮತ್ತು 11 ರಂದು ರಾಜ್ಯದ 58 ಸಾವಿರ ಬೂತ್‌ಗಳಲ್ಲಿಯೂ ಬೂತ್ ಸಭೆಗಳನ್ನು ನಡೆಸಬೇಕು ಮತ್ತು ಬೂತ್ ಅಧ್ಯಕ್ಷನ ಮನೆಯಲ್ಲಿ ಸಭೆಯನ್ನು ಮಾಡಬೇಕು ಎಂದು ಸೂಚನೆ ನೀಡಿದರು. ಏಪ್ರಿಲ್ 15,16 ಮತ್ತು 17ರಂದು ಮನೆಮನೆ ಸಂಪರ್ಕ ಅಭಿಯಾನ ನಡೆಸುವಂತೆ ಸಲಹೆ ನೀಡಿದರು. ಪ್ರತಿ ಬೂತ್‌ಗಳಲ್ಲಿ ಕಾರ್ನರ್ ಸಭೆಗಳು ಬಹಳ ಅಚ್ಚುಕಟ್ಟಾಗಿ ಮಾಡಬೇಕೆಂದು ಸುನಿಲ್ ಕುಮಾರ್ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ವಹಿಸಿದ್ದರು. ಕಾರ್ಕಳ ತಾಲೂಕು ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಮಣಿರಾಜ್ ಶೆಟ್ಟಿ, ಸಹಸಂಚಾಲಕ ಪ್ರವೀಣ್ ಸಾಲ್ಯಾನ್, ಪ್ರಭಾರಿ ಶ್ಯಾಮಲಾ ಕುಂದರ್, ಹಿರಿಯ ಮುಖಂಡ ಕೆ. ಪಿ. ಶೆಣೈ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಮತ್ತು ಕಾರ್ಯದರ್ಶಿ ಉದಯ ಎಸ್. ಕೋಟ್ಯಾನ್ ಉಪಸ್ಥಿತರಿದ್ದರು. ಕಾರ್ಕಳ ತಾಲೂಕು ಬಿಜೆಪಿ ಕಾರ್ಯದರ್ಶಿ ಹರ್ಷವರ್ಧನ್ ನಿಟ್ಟೆ ಕಾರ್ಯಕ್ರಮ ನಿರ್ವಹಿಸಿದರು.

 

 

 

 

Leave a Reply

Your email address will not be published. Required fields are marked *