Share this news

ಕಾರ್ಕಳ: ಬೈಲೂರಿನ ಉಮಿಕ್ಕಲ್ ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಪರಶುರಾಮ ಪ್ರತಿಮೆ ವಿಚಾರದಲ್ಲಿ ಕಾರ್ಕಳ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸುಳ್ಳು ಹಾಗೂ ಅಪಪ್ರಚಾರ ನಡೆಸಿ ವಿನಾ ಕಾರಣ ಗೊಂದಲ ಸೃಷ್ಟಿಸುತ್ತಿದ್ದು ಸುಳ್ಳು ಹರಡುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಾರ್ಕಳ ಬಿಜೆಪಿ ನಾಯಕರು ಬುಧವಾರ ಎಎಸ್ಪಿ ಹಾಗೂ ಕಾರ್ಕಳ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಮಾತನಾಡಿ, ಪರಶುರಾಮ ಪ್ರತಿಮೆಯನ್ನು ಬಲಪಡಿಸುವ ಸಲುವಾಗಿ ಮೂರ್ತಿಯ ಕೆಲ ಭಾಗವನ್ನು ತೆಗೆದು ಮರು ವಿನ್ಯಾಸಗೊಳಿಸಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಅನುಮತಿ ಪಡೆಯಲಾಗಿತ್ತು. ಇದಲ್ಲದೇ ಕಾರ್ಕಳ ತಾಲೂಕು ಆಡಳಿತದ ಪತ್ರದ ಮೇರೆಗೆ ಕಾರ್ಕಳ ಪೊಲೀಸರ ಭದ್ರತೆಯಲ್ಲೇ ಮೂರ್ತಿ ತೆರವುಗೊಳಿಸುವ ಕೆಲಸ ನಡೆದಿತ್ತು.ಆದರೆ ಅಂದು ಪರಶುರಾಮ ಮೂರ್ತಿ ಕಳುವಾಗಿದೆ ಎಂದು ಸುಳ್ಳು ಹಾಗೂ ಆಧಾರರಹಿತ ದೂರು ನೀಡಲಾಗಿತ್ತು.ಇದಲ್ಲದೇ ಪೊಲೀಸರು ಈ ಕುರಿತು ಸಮಗ್ರ ತನಿಖೆ ನಡೆಸಿ ಪರಶುರಾಮ ಪ್ರತಿಮೆ ಫೈಬರ್ ‌ಪ್ರತಿಮೆಯಲ್ಲ ಬದಲಾಗಿ ಹಿತ್ತಾಳೆ ಪ್ರತಿಮೆ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.ಪ್ರಕರಣ ನ್ಯಾಯಾಲಯದ ತನಿಖಾ ಹಂತದಲ್ಲಿದ್ದರೂ ಕಾಂಗ್ರೆಸ್ ಕಾರ್ಯಕರ್ತರು ಪರಶುರಾಮ ಥೀಮ್ ಪಾರ್ಕ್ ಕುರಿತು ನಿರಂತರ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಪ್ರವಾಸೋದ್ಯಮ ಕೇಂದ್ರವಾಗಿರುವ ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಸುಳ್ಳು ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕ್ರಮ‌ ಜರುಗಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ,ರಾಜ್ಯ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ,ಶಿವಪುರ ಸುರೇಶ್ ಶೆಟ್ಟಿ, ಬೋಳ ಸತೀಶ್ ಪೂಜಾರಿ,ಅಂತೋನಿ ಡಿಸೋಜ ನಕ್ರೆ, ಮಹಿಳಾ ಮೋರ್ಚಾದ ರಶ್ಮಿ ಶೆಟ್ಟಿ, ದಿವ್ಯಶ್ರೀ ಅಮೀನ್, ಪಲ್ಲವಿ ಪ್ರವೀಣ್,ಪುರಸಭಾ ಸದಸ್ಯ ಪ್ರದೀಪ್ ಮುಂತಾದವರು ಹಾಜರಿದ್ದರು.

 

 

Leave a Reply

Your email address will not be published. Required fields are marked *