ಕಾರ್ಕಳ: ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಪಹಲ್ಗಾಮ್ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕೈಗೊಂಡ ಐತಿಹಾಸಿಕ “ಆಪರೇಷನ್ ಸಿಂಧೂರ್” ಕಾರ್ಯಾಚರಣೆ ಹಾಗೂ ದೇಶದ ರಕ್ಷಣೆಗೆ ನಡೆಯುತ್ತಿರುವ ವೀರರ ಸಮರದಲ್ಲಿ ಭಾರತೀಯ ಸೈನಿಕರ ಯಶಸ್ಸಿಗಾಗಿ ಕಾರ್ಕಳ ಬಿಜೆಪಿ ಮಂಡಲ ವತಿಯಿಂದ ಭಕ್ತಿ ಭರಿತ, ದೇಶಭಕ್ತಿಯ ಎರಡು ದಿನಗಳ ವಿಶೇಷ ಕಾರ್ಯಕ್ರಮವನ್ನು ಮೇ 11 ಮತ್ತು 12 ರಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದಾದ್ಯಂತ ಎಲ್ಲಾ ಗ್ರಾಮಗಳ ದೇವಾಲಯಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ವಿಶೇಷ ಪೂಜೆ, ಪ್ರಾರ್ಥನೆ, ದೇಶಭಕ್ತರ ಸಂತಾಪದ ನುಡಿನಮನ, ಸೈನಿಕರ ಜಯಕ್ಕಾಗಿ ಆರತಿ ನಡೆಯಲಿದೆ. ಈ ಆರತಿ ಕಾರ್ಯಕ್ರಮವು ದೇಶಕ್ಕಾಗಿ ಪ್ರಾಣಕೊಡಲು ಸಿದ್ಧರಾಗಿರುವ ದೇಶ ಕಾಯುವ ಯೋಧರ ಪರಿಶುದ್ಧ ತ್ಯಾಗದ ಸ್ಮರಣೆಯಾಗಿದೆ. ಕ್ಷೇತ್ರದ ಕಾರ್ಯಕರ್ತರು, ದೇಶಭಕ್ತ ನಾಗರಿಕರು ಇದರಲ್ಲಿ ಪಾಲ್ಗೊಂಡು ದೇಶ ಕಟ್ಟುವ ಕಾರ್ಯದಲ್ಲಿ ಒಂದಾಗಿ, ಒಗ್ಗಟ್ಟಾಗಿ ಸಾಗೋಣ ಎಂದು ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷರಾದ ನವೀನ್ ನಾಯಕ್ ಮನವಿ ಮಾಡಿದ್ದಾರೆ.
ಬಿಜೆಪಿ ಮಂಡಲ ವತಿಯಿಂದ ಇಂದು ಸಂಜೆ 5.30 ಕ್ಕೆ ಶ್ರೀ ವೆಂಕಟರಮಣ ದೇವಸ್ಥಾನದ ಬಳಿಯ ವೀರ ಮಾರುತಿ ಹನುಮಾನ್ ದೇಗುಲದಲ್ಲಿ ವಿಶೇಷ ಪೂಜೆ ನಡೆಯಲಿದ್ದು ಅದಕ್ಕೂ ಮೊದಲು ಬಿಜೆಪಿ ಕಚೇರಿಯಿಂದ ಮೆರವಣಿಗೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.