ಕಾರ್ಕಳ: ಕಾರ್ಕಳ ಸ್ವಚ್ಛ ಬ್ರಿಗೇಡ್ ವತಿಯಿಂದ ಇಂದು ಸ್ಥೀಯ ನಿವಾಸಿಗಳ ಸಹಕಾರದೊಂದಿಗೆ ದಾನಶಾಲೆ ಮುಖ್ಯ ರಸ್ತೆ, ಗೋಮ್ಮಟ ಬೆಟ್ಟ ಪರಿಸರದಲ್ಲಿ ಬೃಹತ್ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಇಂದಿನ ಕಾರ್ಯವನ್ನು ತಮ್ಮ ತಂಡಕ್ಕೆ ಸದಾ ಬೆಂಬಲ, ಸಹಕಾರ ಮತ್ತು ಪ್ರೋತ್ಸಾಹ ನೀಡಿ ಹಲವಾರು ಬಾರಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ದಾನಶಾಲೆ ನಿವಾಸಿ ದಿ. ಮಹಾವೀರ್ ಪ್ರಸಾದ್ ಅವರಿಗೆ ಅರ್ಪಿಸಲಾಯಿತು.
ಪೈಪ್-ಲೈನ್ ಅಳವಡಿಕೆ ಕಾಮಗಾರಿಯಿಂದ ಆದ ಹೊಂಡಗಳನ್ನು ಮಣ್ಣು ಜಲ್ಲಿ ತುಂಬಿ ಮುಚ್ಚಲಾಯಿತು. ಈ ಅಭಿಯಾನದಲ್ಲಿ ಸ್ಥಳೀಯರಾದ ನೇಮಿರಾಜ್ ಅರಿಗ, ಮೃತ ಮಹಾವೀರ್ ಪ್ರಸಾದ ಅವರ ಸಹೋದರ ಶ್ರೀಕಾಂತ್ ಜೈನ್, ಸಹೋದರಿ ಅರುಣಾ ಜೈನ್ ಮತ್ತು ಸ್ವಚ್ಛ ಬ್ರಿಗೇಡ್ ತಂಡದ ಹಾಗು ಸ್ಥಳೀಯರು ಭಾಗವಹಿಸಿದ್ದರು.
