ಕಾರ್ಕಳ ಆ 09: ಹಲವು ರೀತಿಯಲ್ಲಿ ಅಪಪ್ರಚಾರದ ನಾಟಕವಾಡಿದರೂ ಯಶಸ್ಸು ಕಾಣದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟ ಕಾರ್ಕಳ ಕಾಂಗ್ರೆಸ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದ ಒಂದಿಲ್ಲೊAದು ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿರಿಸಿಕೊಂಡು ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಾ ನಾನಾ ರೀತಿಯ ಕಿರುಕುಳ ನೀಡಿ ದ್ವೇಷ ರಾಜಕಾರಣವನ್ನು ಮಾಡುತ್ತಾ ಕಾರ್ಕಳದಲ್ಲಿದ್ದ ಶಾಂತಿಯುತ ರಾಜಕೀಯ ವಾತಾವರಣವನ್ನು ಹಾಳುಗೆಡವಿದೆ ಎಂದು ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಆರೋಪಿಸಿದ್ದಾರೆ
ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ಹೆಚ್ಚುತ್ತಿದ್ದು ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಗೆ ಹಲ್ಲೆ ಮಾಡುವ ಮಟ್ಟಕ್ಕೆ ಇಳಿದಿರುವುದು ತೀರ ಆತಂಕಕಾರಿ ಬೆಳವಣಿಗೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ಬೆಂಬಲದಿAದ ಗೆಲ್ಲಲಾಗದ ಹತಾಶೆಯಿಂದ ಕಾರ್ಕಳ ಕಾಂಗ್ರೆಸ್ಸಿನ ನಾಯಕ ಉದಯ ಶೆಟ್ಟಿ ಇದೀಗ ಬಿಜೆಪಿಯ ಕಾರ್ಯಕರ್ತರನ್ನು ಹೆದರಿಸಿ ಬೆದರಿಸಿ ವೈಯಕ್ತಿಕವಾಗಿ ಮಟ್ಟಹಾಕುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಕಾರ್ಕಳ ಕಾಂಗ್ರೆಸ್ಸಿನ ಈ ದ್ವೇಷ ರಾಜಕಾರಣ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂದು ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಮಟ್ಟಕ್ಕೆ ಮುಂದುವರೆದಿರುವುದು ಬಹಳ ಆತಂಕಕಾರಿ, ಹಾಗೂ ಇದು ಕೇವಲ ಬಿಜೆಪಿ ಕಾರ್ಯಕರ್ತನ ಮೇಲೆ ನಡೆಸಿರುವ ಹಲ್ಲೆ ಅಲ್ಲ ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇದನ್ನು ಕಾರ್ಕಳ ಬಿಜೆಪಿ ಬಹಳ ಕಟುವಾಗಿ ಖಂಡಿಸುತ್ತದೆ. ಇಂತಹ ದ್ವೇಷ ರಾಜಕಾರಣದ ವಿರುದ್ಧ ಬಿಜೆಪಿಯ ಹೋರಾಟ ಇನ್ನಷ್ಟು ತೀವ್ರವಾಗಲಿದೆ.
ಅಂದು ಕಾಂಗ್ರೆಸ್ಸಿನಿAದ ವಿಧಾನಸಭಾ ಟಿಕೆಟ್ ಸಿಗದ ಕಾರಣಕ್ಕೆ ಅವರದೇ ಸ್ವಪಕ್ಷದ ನಾಯಕರುಗಳಿಗೆ ಸಾರ್ವಜನಿಕವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದ ಉದಯ ಶೆಟ್ಟಿಯವರು ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಲಾಗದೇ, ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದೆ ಎನ್ನುವ ಧೈರ್ಯದಿಂದ ಸರಕಾರಿ ಇಲಾಖೆಗಳನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಕಾರ್ಯಕರ್ತರಿಗೆ ವೈಯಕ್ತಿಕವಾಗಿ ಹಾಗೂ ಅವರ ಉದ್ಯಮಗಳಿಗೆ ತೊಂದರೆ ನೀಡುವ ಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಇಂತಹ ಅಸಹ್ಯ, ನೀಚ ರಾಜಕಾರಣವನ್ನು ಇಡೀ ರಾಜ್ಯವೇ ಕಂಡಿರಲಿಕ್ಕಿಲ್ಲ, ಒಂದು ಪಕ್ಷದ ಪರಾಜಿತ ಅಭ್ಯರ್ಥಿ ಮತ್ತು ಆತನ ಪಕ್ಷ ಮತ್ತೊಮ್ಮೆ ಜನ ವಿಶ್ವಾಸ ಗಳಿಸುವ ಪ್ರಯತ್ನ ಮಾಡಬೇಕೇ ವಿನಹ ಈ ರೀತಿಯ ನಡೆ ರಾಜ್ಯ ರಾಜಕಾರಣಕ್ಕೇ ಒಂದು ಕಪ್ಪು ಚುಕ್ಕೆ. ಇದು ಕಾಂಗ್ರೆಸ್ ಪಕ್ಷವನ್ನೇ ವಿನಾಶದ ಹಾದಿಗೆ ತಳ್ಳಲಿದೆ ಎಂದು ರವೀಂದ್ರ ಮೊಯ್ಲಿ ಭವಿಷ್ಯ ನುಡಿದರು