ಕಾರ್ಕಳ:ಬಾಡಿಗೆ ಮನೆಯ ಹಕ್ಕಿನ ವಿಚಾರದಲ್ಲಿ ತಂಡವೊಂದು ಮಹಿಳೆಯನ್ನು ಮನೆಯಿಂದ ಹೊರದಬ್ಬಲು ಯತ್ನಿಸಿ ಜೀವ ಬೆದರಿಕೆ ಹಾಕಿದ ಘಟನೆ ಕಾರ್ಕಳದ ಕಸಬಾ ಗ್ರಾಮದ ಪೆರ್ವಾಜೆ ಎಂಬಲ್ಲಿ ನಡೆದಿದೆ.
ಪೆರ್ವಾಜೆ ಭಾರತ್ ಬೀಡಿ ಕಂಪೌಂಡ್ ಎಂಬಲ್ಲಿ ಶೋಭಾ(64) ಎಂಬವರು ತನ್ನ ಬಾಡಿಗೆ ಹಕ್ಕಿನ ಮನೆಯಲ್ಲಿ ವಾಸವಾಗಿದ್ದರು. ಈ ಮನೆಯ ಹಕ್ಕಿನ ವಿಚಾರವಾಗಿ ಆರೋಪಿಗಳಾದ ಆನಂದ ಜಿ, ಮಂಗಳೂರು, ಶ್ರೀನಿವಾಸ, ಕಾರ್ಕಳ ಮತ್ತು ಮಲ್ಲಿಕಾರ್ಜುನ್ ಎಂಬವರು ಶೋಭಾ ವಾಸಿಸುತ್ತಿದ್ದ ಬಾಡಿಗೆ ಹಕ್ಕಿನ ಮನೆಯ ಸಮೀಪ ಬಂದು ಮನೆಯಿಂದ ಹೊರಗಡೆ ಹೋಗದಂತೆ ಅಕ್ರಮವಾಗಿ ತಡೆದು ನಿಲ್ಲಿಸಿ ಮನೆಯ ಸಾಮಾನುಗಳನ್ನು ಹೊರಗಡೆ ಹಾಕಿ ಬಲತ್ಕಾರದಲ್ಲಿ ಮನೆಯ ಸಾಮಾನುಗಳನ್ನು ಖಾಲಿ ಮಾಡಿಸಲು ಪ್ರಯತ್ನಿಸಿದ್ದಾರೆ, ಈ ಸಂದರ್ಭದಲ್ಲಿ ಶೋಭಾ ಅವರ ಸಹೋದರ ಅನಂತಕೃಷ್ಣ ಇವರು ಘಟನಾ ಸ್ಥಳಕ್ಕೆ ಬಂದಾಗ ಅವರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ಶೋಭಾ ಅವರು ಮನೆಯ ಖಾಲಿ ಮಾಡದಿದ್ದರೆ, ಹೆಚ್ಚು ಜನರನ್ನು ಕರೆದುಕೊಂಡು ಬಂದು ಮನೆಯಿಂದ ಹೊರಗಡೆ ಹಾಕಿ ಕೈ ಕಾಲು ಮುರಿದು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಶೋಭಾ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.