Share this news

 

 

ಕಾರ್ಕಳ,ಜ. 24: ​ಬೈಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಮೈನ್) ಯಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ಬಡಗುತಿಟ್ಟು ಯಕ್ಷಗಾನ ತರಬೇತಿ “ಯಕ್ಷ ಶಿಕ್ಷಣ” ಕಾರ್ಯಕ್ರಮವನ್ನು ಡಿ.22 ರಂದು ಯಕ್ಷಗಾನ ರಂಗದ ಸಂಘಟಕರು ಹಾಗೂ ಬಹುಮೇಳಗಳ ಯಜಮಾನರಾದ ಪಳ್ಳಿ ಕಿಶನ್ ಕುಮಾರ್ ಹೆಗ್ಡೆ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, “ಬಾಲ್ಯದಲ್ಲಿ ಅಕ್ಷರ ಕಲಿಸಿದ ಶಾಲೆಯಲ್ಲಿ ಇಂದು ಕಲಾ ಶಿಕ್ಷಣಕ್ಕೆ ಚಾಲನೆ ನೀಡುತ್ತಿರುವುದು ನನ್ನ ಜೀವನದ ಸೌಭಾಗ್ಯ” ಎಂದರು.
ಶಾಲಾ SDMC ಅಧ್ಯಕ್ಷರಾದ ಸಚ್ಚಿದಾನಂದ ಶೆಟ್ಟಿ ಬೈಲೂರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹವ್ಯಾಸಿ ಭಾಗವತರು ಹಾಗೂ ಯಕ್ಷಗಾನ ಗುರುಗಳಾದ ಸುರೇಶ್ ಆಚಾರ್ಯ ಮರ್ಣೆ, ಮತ್ತು ಶಾಲಾ SDMC ಉಪಾಧ್ಯಕ್ಷರಾದ ಪುಷ್ಪಲತಾ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಮುಖ್ಯೋಪಾಧ್ಯಾಯರಾದ ಆಶಾ ಬಾನು ಪ್ರಾಸ್ತಾವನೆಗೈದು, ಸ್ವಾಗತಿಸಿದರು. ಶಿಕ್ಷಕ ಪ್ರಕಾಶ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಸುರೇಖಾ ಡಿ ಶೇಟ್ ವಂದಿಸಿದರು.
​ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ (SDMC) ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಪೋಷಕರು ಹಾಗೂ ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *