ಕಾರ್ಕಳ: ತಾಲೂಕಿನ ನೀರೆ ಗ್ರಾಮ ಪಂಚಾಯತ್ ನ 2024-2025ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಭವನದಲ್ಲಿ ಮಂಗಳವಾರ ಪಂಚಾಯತ್ ಅಧ್ಯಕ್ಷರಾದ ಸಚ್ಚಿದಾನಂದ ಪ್ರಭು ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಕೃಷಿ ಇಲಾಖೆಯ ಅಧಿಕಾರಿಯಾದ ಸಿದ್ದಪ್ಪ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿ ತಮ್ಮ ಇಲಾಖಾ ಮಾಹಿತಿಯನ್ನು ನೀಡಿ, ಇಲಾಖೆಯ ಸವಲತ್ತುಗಳನ್ನು ಹೆಚ್ಚಾಗಿ ಪಡೆಯುವಂತೆ ಕೋರಿದರು.
ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಪ್ರಭು, ಗ್ರಾಮಸಭೆಯ ಮಹತ್ವ, ಗ್ರಾಮಸಭೆಯಲ್ಲಿ ಪ್ರತಿಯೊಬ್ಬರ ಮತದಾರರ ಪಾಲ್ಗೊಳ್ಳುವಿಕೆ, ಜನರಿಗೆ ಸಿಗುವ ಸವಲತ್ತುಗಳನ್ನು ಸದಸ್ಯರ ಸಹಕಾರದೊಂದಿಗೆ ಆದ್ಯತಾ ಮೇರೆಗೆ ವಿತರಣೆ ಮಾಡಲಾಗುವುದೆಂದು ಸೂಚಿಸಿದರು.
ಪಂಚಾಯತ್ ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ ಪ್ರಾರ್ಥಿಸಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ಅಂಕಿತಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯತ್ ಸದಸ್ಯ ಶಿವಪ್ರಸಾದ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ ವರದಿಯನ್ನು ಮಂಡನೆ ಮಾಡಿದರು. ಸಿಬ್ಬಂದಿ ಗಣೇಶ್ ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆಯನ್ನು ಮಂಡಿಸಿದರು.
ಸಭೆಯಲ್ಲಿ ನೀರೆ ಗ್ರಾಮ ಪಂಚಾಯತ್ ನ ಸರ್ವಸದಸ್ಯರು, ಇಲಾಖಾಧಿಕಾರಿಗಳಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಂದ್ರನಾಥ್, ಆರೋಗ್ಯ ಇಲಾಖೆಯಿಂದ ಶ್ರೀಮತಿ ಅರುಂಧತಿ, ಪೋಲೀಸ್ ಇಲಾಖೆಯಿಂದ ಮಾರುತಿ , ಅರಣ್ಯ ಇಲಾಖೆಯಿಂದ ಶ್ರೀಮತಿ ಮಂಜುಳಾ, ಮೆಸ್ಕಾಂ ಇಲಾಖೆಯಿಂದ ನಾಗೇಂದ್ರ ಮತ್ತು ಮ್ಯಾಕ್ಸಿ, ತೋಟಗಾರಿಕಾ ಇಲಾಖೆಯಿಂದ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಶ್ರೀಮತಿ ಉಮಾ, ಸಮಾಜ ಕಲ್ಯಾಣ ಇಲಾಖೆಯಿಂದ ರಾಘವೇಂದ್ರ ವರ್ಣೇಕರ್, ಬನಶಂಕರಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವಾಣಿ ಶೆಟ್ಟಿ, ಎಲ್ ಸಿ ಆರ್ ಪಿ, ಎಂಬಿಕೆ, ಒಕ್ಕೂಟದ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಧನ್ಯವಾದವಿತ್ತರು. ರಾಷ್ಟ್ರಗೀತೆಯೊಂದಿಗೆ ಗ್ರಾಮಸಬೆಯನ್ನು ಅಂತಿಮಗೊಳಿಸಲಾಯಿತು.














