Share this news

 

ಕಾರ್ಕಳ: ಮಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ವಾಟ್ಸಾಪ್ ಮೂಲಕ ಲಿಂಕ್ ಕಳುಹಿಸಿ ಟಾಸ್ಕ್ ಗೆ ಜಾಯಿನ್ ಆಗುವಂತೆ ತಿಳಿಸಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಕಮಿಷನ್ ನೀಡುವುದಾಗಿ 15 ಲಕ್ಷಕ್ಕೂ ಅಧಿಕ ಹಣವನ್ನು ವಂಚಿಸಿರುವ ಪ್ರಕರಣ ನಡೆದಿದೆ.

ಸಸಿಹಿತ್ಲು ನಿವಾಸಿ ಅಶ್ವಿತ್ ಅವರ ವಾಟ್ಸಾಪ್ ಸಂಖ್ಯೆಗೆಮೀನಾ ಸಕ್ಪಾಲ್ +918433053932 ನಂಬ್ರದಿಂದ ವಾಟ್ಸಾಪ್ ಮೆಸೇಜ್ ಮಾಡಿ ಟೆಲಿಗ್ರಾಫ್ App ನಲ್ಲಿ S-Coin Investemnet task ಗೆ Join ಆಗುವಂತೆ ಹೇಳಿದ್ದು ಅಶ್ವಿತ್ ಅವರು App ಗೆ Join ಅಗಿ Account Detais  ಕಳುಹಿಸಿದ್ದರು. ಬಳಿಕ Task ಗೆ ಹೆಚ್ಚಿನ ಹಣ ಹಾಕಿದರೆ ಹೆಚ್ಚು ಕಮಿಷನ್ ನೀಡುವುದಾಗಿ ನಂಬಿಸಿದ್ದು ಅಶ್ವಿತ್ ಅವರು Maharastra Bank Mangalore Branch ಖಾತೆಯಿಂದ 29/01/2025 ರಿಂದ 19/06/2025  ವರೆಗೆS-Coin Investemnet ಸೇರಿದ. UPI ನಂಬರಿಗೆ ಒಟ್ಟು 15,52,650 ರೂ. ಹಣ ಹಾಕಿದ್ದರು. ಬಳಿಕ ಇನ್ನೂ ಹೆಚ್ಚಿನ ಹಣ ಹಾಕುವಂತೆ ತಿಳಿಸಿದಾಗ ಅಶ್ವಿತ್ ಅವರು ಹಾಕಿದ ಹಣ ವಾಪಾಸು ನೀಡುವಂತೆ ಕೇಳಿದ್ದರು. ಅದಕ್ಕೆ Tax Payment ಮಾಡಬೇಕು ಎಂದು ಹಣ ವಾಪಾಸು ನೀಡದೇ ವಂಚನೆ ಎಸಗಿದ್ದಾರೆ ಎಂದು ದೂರು ನೀಡಿದ್ದು, ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published. Required fields are marked *