
ಕಾರ್ಕಳ, ಜ.07: ವ್ಯಕ್ತಿಯೊಬ್ಬರ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಮೂವರು ವ್ಯಕ್ತಿಗಳು ದಾಂಧಲೆ ನಡೆಸಿ ಸೊತ್ತುಗಳನ್ನು ನಾಶ ಮಾಡಿದ್ದಲ್ಲದೆ ಮಹಿಳೆಗೆ ಚಾಕು ತೋರಿಸಿ ಜೀವ ಬೆದರಿಕೆಯೊಡ್ಡಿರುವ ಪ್ರಕರಣ ಕಾರ್ಕಳದಲ್ಲಿ ಜ.5 ರಂದು ನಡೆದಿದೆ.
ಕಾರ್ಕಳ ಕುಕ್ಕುಂದೂರಿನ ತಾಹಿರ ಬಾನು ಎಂಬವರ ಮನೆಯ ಅಂಗಳಕ್ಕೆ ಆರೋಪಿಗಳಾದ ಶಿಫಾ ಫಾತಿಮಾ, ಅನೀಕ್ ಮತ್ತು ಜೈನಬ ಎಂಬವರು ಅಕ್ರಮವಾಗಿ ಪ್ರವೇಶಿಸಿ ಬಾಗಿಲಿಗೆ ಒದ್ದು, ಕಿಟಕಿಯ ಗಾಜು ಹಾಗೂ ಅಂಗಳದಲ್ಲಿ ಸ್ಕೂಟರ್ ಒಟ್ಟು 60,000 ರೂ. ಮೌಲ್ಯದ ಸೊತ್ತುಗಳನ್ನು ನಾಶ ಮಾಡಿದ್ದಲ್ಲದೆ, ಮಹಿಳೆಗೆ ಚಾಕು ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ತಾಹಿರ ಬಾನು ದೂರು ನೀಡಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
