Share this news

 

 

 

 

ಕಾರ್ಕಳ :  ವಿದ್ಯಾರ್ಥಿಗಳು ಹಾಗೂ ಪೋಷಕರೇ ಶಿಕ್ಷಣ ಸಂಸ್ಥೆಯ ಆಧಾರ ಸ್ತಂಭಗಳು. ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ಪೋಷಕರ ಬೆಂಬಲ ಬೇಕು. ನಕಾರಾತ್ಮಕ ಚಿಂತನೆಗಳನ್ನು ಬಿಟ್ಟು ಓದಿನ ಕಡೆಗೆ ಗಮನ ಕೊಟ್ಟರೆ ಜೀವನದಲ್ಲಿ ಯಶಸ್ಸು ಸಾಧ್ಯ.
ಪೋಷಕರು ಮಕ್ಕಳ ಓದಿಗೆ ಬೆಂಬಲಿಸಬೇಕು ಆದರೆ ಒತ್ತಡ ಹಾಕಬಾರದು. ಇತರ ವಿದ್ಯಾರ್ಥಿಗಳ ಜೊತೆ ಹೋಲಿಕೆ ಬೇಡ. ದೇಶಕ್ಕೆ ಜ್ಞಾನಸುಧಾ ಸಂಸ್ಥೆ ಮಹತ್ತರ ಕೊಡುಗೆ ನೀಡಿದೆ. ಸಾಕಷ್ಟು ಇಂಜಿನಿಯರ್, ವೈದ್ಯರನ್ನು ಕೊಡುಗೆಯಾಗಿ ನೀಡಿದೆ. ದೊಡ್ಡ ದೊಡ್ಡ ಕನಸುಗಳನ್ನು  ಕಾಣಬೇಕು ಆದರೆ ಸಾಧನೆ ಅದಕ್ಕಿಂತಲೂ ಮಿಗಿಲಾಗಿರಬೇಕು ಎಂದು ಮಣಿಪಾಲ ಮಾಹೆ ಉಪಕುಲಪತಿ ಡಾ.ಶರತ್ ರಾವ್ ಹೇಳಿದರು.

ಅವರು ಭಾನುವಾರ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಜ್ಞಾನ ಸುಧ ವಿದ್ಯಾಸಂಸ್ಥೆ ಪರಿಶ್ರಮದ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದೆ. ಸುಧಾಕರ ಶೆಟ್ಟಿ ಓರ್ವ ಶಿಕ್ಷಣ ಪ್ರೇಮಿ ಮಾತ್ರವಲ್ಲ. ಬಹುದೊಡ್ಡ ರಾಷ್ಟ ಪ್ರೇಮಿ. ಜ್ಞಾನಸುಧ ಬರೀ ಕಟ್ಟಡಗಳ ಕೇಂದ್ರವಲ್ಲ ಬದಲಾಗಿ ಮೌಲ್ಯಗಳ, ಕನಸುಗಳನ್ನು ಬಿತ್ತುವ ಹಾಗೂ ಬದುಕು ಕಟ್ಟುಕೊಳ್ಳಲು ಮೌಲ್ಯಗಳನ್ನು ಕಲಿಸಿಕೊಡುವ ಕೇಂದ್ರವಾಗಿದೆ ಎಂದರು.

ಮೂಡುಬಿದ್ರಿ ಎಸ್.ಕೆ.ಎಫ್ ಚೇರ್‌ಮನ್ ಡಾ. ಜಿ. ರಾಮಕೃಷ್ಣ ಆಚಾರ್,ಜ್ಞಾನ ಸುಧಾ ಪೂರ್ವ ವಿದ್ಯಾರ್ಥಿ ಗೂಗಲ್’ನ ಸಾಫ್ಟ್ ವೇರ್ ಇಂಜಿನಿಯರ್ ವಿದ್ಯಾರ್ಥಿ ಸಂಕೇತ್ ಜಿ ಬಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ MBBS ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು, ಜೆ.ಇ.ಇ ಅಡ್ವಾನ್ಸ್ ಹಾಗೂ ಜೆ.ಇ.ಇ ಮೈನ್ ಮೂಲಕ ಐ.ಐ.ಟಿ, ಐ.ಐ.ಎಸ್.ಸಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಹಾಗೂ ಎನ್.ಐ.ಟಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು, ಕೆ.ಸಿ.ಇ.ಟಿ ಇಂಜಿನಿಯರ್‌ನಲ್ಲಿ 1 ಸಾವಿರದೊಳಗಿನ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು, ರಾಷ್ಟ್ರ ಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಶಸ್ತಿಗಳಿಸಿದ, ಸಿ.ಎ. ಫೌಂಡೇಶನ್ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಹಾಗೂ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಪೂರ್ವ ವಿದ್ಯಾರ್ಥಿಗಳನ್ನು ಹಾಗೂ ಎನ್.ಡಿ.ಎ ಯಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 227 ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳ ಪರವಾಗಿ 3.42 ಲಕ್ಷ ರೂ ಚೆಕ್ಕನ್ನು ಭಾರತೀಯ ಸೇನೆಗೆ ಹಾಗೂ ಟೆಕ್ ವಾರ್ ಸಂಸ್ಥೆಗೆ ಒಂದು ಲಕ್ಷ ರೂಪಾಯಿಯನ್ನು ಹಸ್ತಾಂತರಿಸಲಾಯಿತು.

ಅಜೆಕಾರು ಪದ್ಮಗೋಪಾಲ್ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಸುಧಾಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಸಂಗೀತ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

 

 

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

    

   

             

     

             

           
   

 

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

 

Leave a Reply

Your email address will not be published. Required fields are marked *