ಕಾರ್ಕಳ: ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್ – ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ವಿಹಾರಾರ್ಥವಾಗಿ ಮಕ್ಕಳು ಹಿರಿಯಡ್ಕದ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ವಿಹಾರದ ಮುಖ್ಯ ಅತಿಥಿಯಾಗಿ ಆಗಮಿಸಿದ ರಂಗಕರ್ಮಿ, ಸಾಹಿತಿ ಪೂರ್ಣಿಮಾ ಸುರೇಶ್ ಸ್ಥಳ ಸಾನಿಧ್ಯದ ಪರಿಚಯ ಮಾಡಿಕೊಟ್ಟರು. ನಮ್ಮ ಊರಿನ ಕ್ಷೇತ್ರದ ಮಹಿಮೆಗಳನ್ನು, ಹಿರಿಯರು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ, ದೈವಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಿಕೊAಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಮಕ್ಕಳು ದೇವಸ್ಥಾನದ ಮುಂಭಾಗದಲ್ಲಿರುವ ಭೂತರಾಜ ಕಂಬ, ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ, ಬ್ರಹ್ಮಲಿಂಗ ದೇವರಗುಡಿ, ಬೊಬ್ಬರ್ಯ ಕಂಬ, ಆದಿ ನಾಗಬನ, ಆದಿ ಬ್ರಹ್ಮಸ್ಥಾನ, ವ್ಯಾಘ್ರ ಚಾಮುಂಡಿ ಗುಡಿ, ಪರಿವಾರ ಗಣಶಾಲೆ (ಆಲಡೆ), ಗುರುಚಿ ಮರ, ಅಡಕತ್ತಾಯ, ಕ್ಷೇತ್ರಪಾಲ, ಪುಷ್ಕರಣಿ, ಶೂಲಪಾಣಿ ಮತ್ತು ದಂಡಪಾಣಿ ಗುಡಿ, ಮಾಲಿ-ಸುಮಾಲಿ ದ್ವಾರಪಾಲಕ ಮಂಟಪಗಳನ್ನು ದರ್ಶನ ಪಡೆಯುವುದರ ಜೊತೆಗೆ ದೇಗುಲದ ಒಳಾಂಗಣ, ಹೊರಾಂಗಣ ಮತ್ತು ಮೇಲ್ಛಾವಣಿಯ ದಾರುಶಿಲ್ಪಗಳನ್ನು ಕಂಡು ರೋಮಾಂಚನಗೊAಡರು.
ಈ ಸಂದರ್ಭ ವೃಂದದ ಉಪಾಧ್ಯಕ್ಷರಾದ ಡಾ.ದಯಾನಂದ ಬಾಯಾರ್, ಕಾರ್ಯದರ್ಶಿ ಸಂಗೀತಾ ಕುಲಾಲ್, ಸದಸ್ಯರಾದ ಜ್ಯೋತಿ ಪದ್ಮನಾಭ ಭಂಡಿ, ಗಾಯತ್ರಿ ನಾಗೇಶ್, ಚೇತನಾ ಸಂದೀಪ್, ಸಂತೋಷ್, ಸಂತೋಷ್ ನೆಲ್ಲಿಕಾರು, ಶೋಭಾ, ಶ್ರೀಮತಿ ಪ್ರಸಾದಿನಿ ಹಾಗೂ ಚಂದ್ರಶೇಖರ್ ಪೂಜಾರಿ ಉಪಸ್ಥಿತರಿದ್ದರು.