Share this news

ಕಾರ್ಕಳ: ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಮಾಳದಲ್ಲಿ ಭೂಕುಸಿತ ಉಂಟಾಗಿದೆ. ಮಾಳದಲ್ಲಿ ಹಾದುಹೋಗುವ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು, ಮಣ್ಣು ತೆರವುಗೊಳಿಸಲು ಕ್ರಮ ವಹಿಸಲಾಗಿದೆ.

ಪಳ್ಳಿ ಗ್ರಾಮದಲ್ಲೂ ಮಳೆಹಾನಿ ಉಂಟಾಗಿದ್ದು, ಕಲ್ಲೆಚ್ಚಿ ಎಂಬಲ್ಲಿ ಜಯಂತಿ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ರೂ.20000 ನಷ್ಟ ಸಂಭವಿಸಿದೆ.

ಮಳೆಹಾನಿ ಪ್ರದೇಶಗಳಿಗೆ ತಹಸೀಲ್ದಾರರು ಹಾಗೂ ಕಂದಾಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

Leave a Reply

Your email address will not be published. Required fields are marked *