ಕಾರ್ಕಳ: ಅಲೈಟ್‌ಕೇರ್ ಎಂಬ ಸಂಸ್ಥೆಯ ಮಾಲೀಕ ಹೋಂ ನರ್ಸ್ ಕೆಲಸಗಾರನನ್ನು ಬಳಸಿಕೊಂಡು ಕಾರ್ಕಳದ ಶಶಿಧರ ಎಂಬವರ ಖಾತೆಯಿಂದ 9 ಲಕ್ಷಕ್ಕೂ ಅಧಿಕ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ಎಸಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ ಕಸಬಾ ನಿವಾಸಿ ಶಶಿಧರ ಎಂಬವರು ಆರೋಪಿ ರತ್ನಾಕರ ಎಂಬಾತನ ಅಲೈಟ್‌ಕೇರ್ ಎಂಬ ಸಂಸ್ಥೆಯಿAದ ಕಾರ್ತಿಕ ಎಂಬಾತನನ್ನು ಹೋಂ ನರ್ಸ್ ಕೆಲಸಕ್ಕೆ ನೇಮಿಸಿದ್ದರು. ಕಳೆದ ನ.9 ರಂದು ರತ್ನಾಕರ , ಶಶಿಧರ ಅವರಿಗೆ 10,000 ರೂ. ಹಣ ನೀಡಿ ಕಾರ್ತಿಕನ ಖಾತೆಗೆ 10,000 ರೂ. ಹಣವನ್ನು ಗೂಗಲ್ ಪೇ ಮಾಡಲು ತಿಳಿಸಿದ್ದರು. ಅದರಂತೆ ಶಶಿಧರ ಅವರು ಗೂಗಲ್ ಪೇ ಮಾಡಿದ್ದರು.
ಅವರು ಗೂಗಲ್ ಪೇ ಮಾಡುವ ಸಂದರ್ಭ ಪಕ್ಕದಲ್ಲಿಯೇ ಇದ್ದು ಗೂಗಲ್ ಪೇ ಪಿನ್ ನಂಬರ್ ನೋಡಿದ್ದ ರತ್ನಾಕರ ನ.10 ರಿಂದ ಡಿ.8 ರ ಮದ್ಯಾವಧಿಯಲ್ಲಿ ಶಶಿಧರ ಅವರ ಯುನಿಯನ್ ಬ್ಯಾಂಕ್ ಕಾರ್ಕಳ ಶಾಖೆಯ ಖಾತೆ ಯಿಂದ ಗೂಗಲ್ ಪೇ ಮುಖಾಂತರ 9,80,000/- ರೂ ಹಣವನ್ನು ತನ್ನ ಭಾರತ್ ಬ್ಯಾಂಕ್ ಕೋ-ಅಪರೇಟಿವ್ ಸೊಸೈಟಿ ಖಾತೆಗೆ ಗೂಗಲ್ ಪೇ ಮುಖಾಂತರ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾನೆ ಎಂದು ಶಶಿಧರ ಅವರು ದೂರು ನೀಡಿದ್ದು, ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.