Share this news

ಕಾರ್ಕಳ : ಪಡುತಿರುಪತಿ ಎಂದೇ ನಂಬಿಕೊAಡು ಆರಾಧಿಸಿಕೊಂಡು ಬಂದಿರುವ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಿಂದ ಅನಂತಶಯನದವರೆಗಿನ ರಸ್ತೆಯನ್ನು ರಥಬೀದಿ ಎಂದು ಕರೆಯಲಾಗುತ್ತಿದೆ. ಈ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ದೀಪೋತ್ಸವ ಹಾಗೂ ರಥೋತ್ಸವದ ಸಂದರ್ಭದಲ್ಲಿ ಗುರ್ಜಿ ಹಾಗೂ ರಥಗಳನ್ನು ಅಳವಡಿಸಿ ಅದರಲ್ಲಿ ದೇವರನ್ನು ಇರಿಸಿ ಪೂಜಿಸಲಾಗುತ್ತಿದೆ. ಸದ್ರಿ ಗುರ್ಜಿಗಳನ್ನು ಅಳವಡಿಸಲು ಸಣ್ಣ ಪ್ರಮಾಣದಲ್ಲಿ ರಸ್ತೆಯನ್ನು ಅಗೆದು ದೀಪೋತ್ಸವ/ರಥೋತ್ಸವ ಮುಗಿದ ಮಾರನೆಯ ದಿನವೇ ಆಗೆದ ರಸ್ತೆಯ ಭಾಗವನ್ನು ದುರಸ್ತಿಗೊಳಿಸಿ ಸಂಚಾರ ಯೋಗ್ಯ ರಸ್ತೆಯನ್ನಾಗಿ ದೇವಸ್ಥಾನ ವತಿಯಿಂದ ಮಾಡಿಕೊಡಲಾಗುತ್ತಿದೆ. ಈ ಬಗ್ಗೆ ಈವರೆಗೂ ಕಾರ್ಕಳ ಪುರಸಭೆ ಆಡಳಿತವು ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡಿರುವುದಿಲ್ಲ.

ಕಾರ್ಕಳ ತಾಲೂಕಿನ ಅಭಿವೃದ್ಧಿಗೆ ಶ್ರೀ ವೆಂಕಟರಮಣ ದೇವಾಸ್ಥಾನ ಮತ್ತು ಅದಕ್ಕೆ ಸಂಬAಧಪಟ್ಟ ಆಡಳಿತ ಮಂಡಳಿಯ ಕೊಡುಗೆ ಅಪಾರ. ಕಾರ್ಕಳ ಮುಖ್ಯರಸ್ತೆಯ ಅಗಲೀಕರಣದ ಸಂದರ್ಭದಲ್ಲಿ ಶ್ರೀ ವೆಂಕಟರಮಣ ದೇವಳದ ಕೆರೆಗೆ ಹೋಗುವ ಪ್ರದೇಶ, ಮಣ್ಣಗೋಪುರ ಪ್ರದೇಶ ಹಾಗೂ ಅನಂತಶಯನ ಪದ್ಮಾವತಿ ದೇವಸ್ಥಾನದ ಎದುರುಗಡೆ ಪ್ರದೇಶದಲ್ಲಿ ರಸ್ತೆಗಾಗಿ ತಮ್ಮ ಜಾಗವನ್ನು ಬಿಟ್ಟುಕೊಟ್ಟು ನಗರದ ಅಭಿವೃದ್ಧಿಗೆ ಕೈ ಜೋಡಿಸಿರುವುದು ಉಲ್ಲೇಖನೀಯ ಮಾತ್ರವಲ್ಲದೆ, ಕಾರ್ಕಳದ ಸಿಗಡಿಕೆರೆ ಅಭಿವೃದ್ಧಿ ಸಂದರ್ಭದಲ್ಲಿ ಪ್ರಥಮ ದೇಣಿಗೆಯನ್ನು ದೇವಸ್ಥಾನದ ವತಿಯಿಂದಲೇ ನೀಡಲಾಗಿದೆ.

ತಾವು ಹೊರಡಿಸಿದ ಉಲ್ಲೇಖಿತ ಪತ್ರವು ತಮ್ಮ ಏಕಪಕ್ಷೀಯ ಆಡಳಿತಾತ್ಮಕ ನಿರ್ಧಾರವಾಗಿದ್ದು, ಈ ಬಗ್ಗೆ ಪುರಸಭೆಯ ಸಾಮಾನ್ಯ ಸಭೆ, ಪುರಸಭೆಯ ಅಧ್ಯಕ್ಷ ಅಥವಾ ಉಪಾಧ್ಯಕ್ಷರಲ್ಲಾಗಲೀ ದೇವಸ್ಥಾನ ಇರುವ ಪ್ರದೇಶಕ್ಕೆ ಸಂಬAಧಪಟ್ಟ ವಾರ್ಡ್ ಸದಸ್ಯರಲ್ಲಾಗಲೀ ಯಾವುದೇ ರೀತಿಯ ಚರ್ಚೆಯನ್ನು ಮಾಡಿರುವುದಿಲ್ಲ ಮತ್ತು ಸದ್ರಿಯವರುಗಳ ಗಮನಕ್ಕೂ ತಂದಿರುವುದಿಲ್ಲ. ತಮ್ಮ ಏಕಪಕ್ಷೀಯ ನಿರ್ಧಾರದಿಂದಾಗಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯಕ್ಕೆ ದಕ್ಕೆಯಾಗಿರುತ್ತದೆ. ತಮ್ಮ ಈ ಪತ್ರ ವ್ಯವಹಾರಕ್ಕೆ ಪುರಸಭೆಯ ಕೌನ್ಸಿಲ್‌ನ ಒಪ್ಪಿಗೆಯೂ ಇರುವುದಿಲ್ಲ. ಈ ರೀತಿಯ ನೋಟಿಸ್ ನೀಡಲು ತಮಗೆ ಒತ್ತಡ ಹಾಕಿದವರು ಯಾರು ಎಂದು ನಮ್ಮ ಗಮನಕ್ಕೆ ತರಬೇಕು. ಅದೇ ರೀತಿ ಮುಂದಿನ ದಿನಗಳಲ್ಲಿ ಪುರಸಭೆ ಅಧ್ಯಕ್ಷರ ಅಥವಾ ಕೌನ್ಸಿಲ್‌ನ ಗಮನಕ್ಕೆ ತರದೆ ಈ ರೀತಿಯ ಯಾವುದೇ ನೋಟಿಸ್ ನೀಡಬಾರದಾಗಿ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ ಹಾಗೂ ಉಪಾಧ್ಯಕ್ಷ ಕೆ .ಪಿ.ಪ್ರಶಾಂತ್ ಕೋಟ್ಯಾನ್ ನೆಕ್ಲಾಜೆಗುತ್ತು ಮುಖ್ಯಾಧಿಕಾರಿಗೆ ನೀಡಿದ ನೋಟೀಸ್‌ನಲ್ಲಿ ಉಲ್ಲೇಖಿಸಿದ್ದಾರೆ.

 

Leave a Reply

Your email address will not be published. Required fields are marked *