ಕಾರ್ಕಳ : ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ದಲಿತರ ಭೂಮಿ – ವಸತಿ ಹಕ್ಕಿಗಾಗಿ ಮತ್ತು ಇತರೆ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಕಳ ತಾಲೂಕು ಶಾಖೆ ನೇತೃತ್ವದಲ್ಲಿ ಜು. 18ರಂದು ಕಾರ್ಕಳ ತಾಲೂಕು ಕಚೇರಿ ಮುಂಭಾಗವೂ ಪ್ರತಿಭಟನೆ ನಡೆಯಿತು. ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಉಡುಪಿ ಜಿಲ್ಲೆಯಲ್ಲಿ ಡಿ.ಸಿ. ಮನ್ನಾ ಭೂಮಿಗಳನ್ನು ಅರ್ಹ ಭೂರಹಿತ ಪರಿಶಿಷ್ಟ ಜಾತಿ/ಪಂಗಡ ಜನರಿಗೆ ಮರು ಹಂಚಿಕೆ ಮಾಡಬೇಕು ಹಾಗೂ ಉಡುಪಿ ಜಿಲ್ಲೆಯ ಅಕ್ರಮ ಸಕ್ರಮ ಸಮಿತಿಗಳು ಕರ್ನಾಟಕ ಭೂ ಮಂಜೂರಾತಿ ಅಧಿನಿಯಮದಂತೆ ಲಭ್ಯ ಭೂಮಿಯ ಶೇಕಡಾ 50%ನ್ನು ದಲಿತ ಸಮುದಾಯಗಳಿಗೆ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರ್, ಜಿಲ್ಲಾ ಸಂಘಟನಾ ಸಂಚಾಲಕ ಅಣ್ಣಪ್ಪ ನಕ್ರೆ, ರಾಜ್ಯ ಸಂಘಟನಾ ಸಂಚಾಲಕ ಹೂವಪ್ಪ ಮಾಸ್ತರ್, ಕಾರ್ಕಳ ತಾಲೂಕು ಪ್ರಧಾನ ಸಂಚಾಲಕ ನ್ಯಾಯವಾದಿ ರಾಘವ ಕುಕ್ಕುಜೆ, ಉಪ ಪ್ರಧಾನ ಸಂಚಾಲಕ ರಮೇಶ್ ಬಿ. ಪೆರ್ವಾಜೆ, ಸಂಘಟನಾ ಸಂಚಾಲಕರಾದ ಸುಂದರ ಹವಾಲ್ದಾರ್‌ಬೆಟ್ಟು, ಕೆ.ಕೆ. ಸಾಲಿಯಾನ್, ರಮೇಶ್ ಜರಿಗುಡ್ಡೆ, ಖಜಾಂಚಿ ಸುಂದರ್ ನಲ್ಲೂರು, ಉಪ ಖಜಾಂಚಿ ಸೋಮನಾಥ್ ನಾಯ್ಕ್, ಪುರಸಭಾ ಸದಸ್ಯರಾದ ಪ್ರತಿಮಾ ರಾಣೆ, ಸೋಮನಾಥ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಮುಡಿಯನೂರು ಗ್ರಾಮದ ಸರ್ವೆ ನಂಬ್ರ 371, 384 ರ ಸರಕಾರಿ ಜಮೀನುಗಳಲ್ಲಿ ಪರಿಶಿಷ್ಟ ಜಾತಿಯ ಸುಮಾರು 7 ಕುಟುಂಬಗಳು ಪೂರ್ವಿಕರ ಕಾಲದಿಂದಲೂ ಅನುಭವನ್ನು ಹೊಂದಿದ್ದು, ನಮೂನೆ 50, 53, 57 ಅರ್ಜಿಗಳನ್ನು ಸಲ್ಲಿಸಿಕೊಂಡಿದ್ದರು ಜಮೀನನ್ನು ಮಂಜೂರು ಮಾಡದೇ ನಕಲಿ ದಾಖಲೆಗಳನ್ನು ತಕ್ಷಣ ರದ್ದುಪಡಿಸಿ ಸದ್ರಿ ಜಮೀನುಗಳನ್ನು ಹಿಡುವಳಿದಾರರಿಗೆ ಮಂಜೂರು ಮಾಡಲು ತಕ್ಷಣ ಕ್ರಮ ವಹಿಸಬೇಕು. ಬಿ. ಕೊರವೇನೂರು ಗ್ರಾಮದಲ್ಲಿ 2 ಎಕ್ರೆ ಜಮೀನನ್ನು ರೈತರಿಗೆ ನಿವೇಶನಕ್ಕಾಗಿ ಮಂಜೂರು ಮಾಡಬೇಕು ಹಾಗೂ 1 ಎಕ್ರೆ ಜಮೀನನ್ನು ದಲಿತರಿಗೆ ಸ್ಮಶಾನಕ್ಕಾಗಿ ಕಾಯ್ದಿರಿಸಬೇಕು. ಮುಳಬಾಗಿಲು ತಾಲೂಕು ಜಮ್ಮನಹಳ್ಳಿ ಗ್ರಾಮದ ಸರ್ವೆ ನಂಬ್ರ 6 ರಲ್ಲಿ ಹುಲ್ಲು ಬನ್ನಿ ಜಮೀನನ್ನು ಅಕ್ರಮವಾಗಿ ಲೇಔಟ್ ಮಾಡಿದ್ದು ಈ ಕೂಡಲೇ ಸರಕಾರ ವಶಪಡಿಸಿಕೊಳ್ಳಬೇಕು ಹಾಗೂ ಸರ್ವೆ ನಂಬ್ರ 103ರ ಗೋಮಾಳ ಜಮೀನಿನ ಹುಲ್ಲುಗಾವಲಿಗೆ ಕಾಯ್ದಿರಿಸಬೇಕು. ನಕಲಿ ದಾಖಲೆಗಳನ್ನು ರದ್ದುಪಡಿಸಿ ಜಾನುವಾರುಗಳಿಗೆ ಹುಲ್ಲುಗಾವಲಿಗೆ ಕಾಯ್ದಿರಿಸಬೇಕು., ಮುಳಬಾಗಿಲು ತಾಲೂಕು ದುಗ್ಗಸಂದ್ರ ಹೋಬಳಿ ಆಗರ ಗ್ರಾಮದ ಸರ್ವೆ ನಂಬ್ರ 200ರಲ್ಲಿ ಸಾಗುವಳಿ ಚೀಟಿ ನೀಡಿದ್ದರೂ ಇಲ್ಲಿಯವರೆಗೂ ಖಾತೆ ಮಾಡದೇ ಇದ್ದು ತಕ್ಷಣ ಈ ಕೂಡಲೇ ಗಣಕೀಕೃತ ಪಹಣಿಯಲ್ಲಿ ಖಾತೆ ಮಾಡಿಕೊಡಬೇಕು. ಮುಳಬಾಗಿಲು ತಾಲೂಕು ದುಗ್ಗಸಂದ್ರ ಹೋಬಳಿ ನಾಚಹಳ್ಳಿ ಮಜರಾ ಕದಿರೇನಹಳ್ಳಿ ಸರ್ವೆ ನಂಬ್ರ 111ರಲ್ಲಿ 2 ಎಕ್ರೆ ಜಮೀನನ್ನು ವಾಲ್ಮೀಕಿ ಸಮುದಾಯ ಭವನಕ್ಕೆ ಈ ಕೂಡಲೇ ಮಂಜೂರು ಮಾಡಿಕೊಡಬೇಕು. ಮುಳಬಾಗಿಲು ತಾಲೂಕು ತಾಯಲೂರು ಹೋಬಳಿ, ಡಿ. ಕುರುಬರಹಳ್ಳಿ ಗ್ರಾಮದ ಸರ್ವೆ ನಂಬ್ರ 17ರಲ್ಲಿರುವ 2 ಎಕ್ರೆ ಜಮೀನನ್ನು ಈ ಕೂಡಲೇ ನಿವೇಶನ ರಹಿತರಿಗೆ ಹಕ್ಕು ಪತ್ರ ಮಂಜೂರು ಮಾಡಬೇಕು. ಆವಣಿ ಹೋಬಳಿ, ಗೋಪಚಂದ್ರ ಗ್ರಾಮದಲ್ಲಿನ 2 ಕೆರೆಗಳ ಹಾಗೂ ಸ್ಮಶಾನಗಳ ಒತ್ತುವರಿಯನ್ನು ಈ ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ರಾಮಸಂದ್ರ ಸರ್ವೆ ನಂಬ್ರ 35ರಲ್ಲಿ 2 ಎಕ್ರೆ ಜಮೀನನ್ನು ಸ್ಮಶಾನಕ್ಕೆ ಈ ಕೂಡಲೇ ಮಂಜೂರು ಮಾಡಬೇಕು. ತಾಯಲೂರು ಹೋಬಳಿ, ಕರಿವಿರೆಡ್ಡಿಹಳ್ಳಿ ಗ್ರಾಮದ ಸರ್ವೆ ನಂಬ್ರ 39. ರಲ್ಲಿನ ಸ್ಮಶಾನವನ್ನು ಸರ್ವೆ ಮಾಡಿ ಕಂಪೌAಡು ನಿರ್ಮಿಸಿಕೊಡಬೇಕು. ಹಾಗೂ ತಾಲ್ಲೂಕಿನಾದ್ಯಂತ ಪಿ. ನಂಬರುಗಳನ್ನು ತೆಗೆಯಲು ದುರಸ್ಥಿ ಮಾಡಲು ಕ್ರಮಕೈಗೊಳ್ಳಬೇಕು.
ಅವಣಿ ಹೋಬಳಿ, ಗಂಜಿಗುAಟೆ ಗ್ರಾಮದಿಂದ ಆವಣಿಗೆ ಹಾದು ಹೋಗುವ ಸರ್ಕಾರಿ ಕಾಲುದಾರಿಯನ್ನು ತೆರವುಗೊಳಿಸಿ ರೈತರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕು. ದುಗ್ಗಸಂದ್ರ ಹೋಬಳಿ, ಚಾಕೆತಿಮ್ಮನದಿನ್ನೆ ಗ್ರಾಮದ ಸರ್ವೆ ನಂಬ್ರ 127 ರಲ್ಲಿ ವೆಂಕಟೇಶಪ್ಪ, ಕಾಗತಿ ಮುನಿಸ್ವಾಮಿ, ರಾಮಕೃಷ್ಣಪ್ಪ, ಮುಳಬಾಗಲು ಎಂಬವರು ಅನುಭವದಲ್ಲಿದ್ದು, ಸದರಿ ಸರ್ವೆ ನಂಬ್ರ ನಲ್ಲಿಯೇ 20 ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡು ವಾಸವಿದ್ದು ನಮೂನೆ 50, 53 ನಮೂನೆಗಳನ್ನು ಸಲ್ಲಿಸಿದ್ದರೂ ಸಹ ಇಲ್ಲಿಯವರೆಗೂ ಜಮೀನು ಮಂಜೂರು ಮಾಡದೇ ನಿರ್ಲಕ್ಷತೆ ವಹಿಸಿದ್ದು ಈ ಕೂಡಲೇ ಇವರಿಗೆ ಸದ್ರಿ ಜಮೀನನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
