
ಕಾರ್ಕಳ,ಡಿ.21:ಚಲಿಸುತ್ತಿದ್ದ ಆಟೋ ರಿಕ್ಷಾಗೆ ಹಿಂದಿನಿಂದ ಬಂದ ಇನ್ನೋವಾ ಡಿಕ್ಕಿಯಾದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಚಾಲಕ ಹಾಗೂ ಪ್ರಯಾಣಿಕ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ.
ರಿಕ್ಷಾ ಚಾಲಕ ಮೂಡುಬಿದಿರೆ ಕೆಲ್ಲಪುತ್ತಿಗೆ ನಿವಾಸಿ ರತ್ನಾಕರ್ ಸಾಲ್ಯಾನ್ ಹಾಗೂ ಪ್ರಯಾಣಿಕರಾದ ಸಾಧು ಎಂಬವರು ಗಾಯಗೊಂಡಿದ್ದಾರೆ.
ರತ್ನಾಕರ್ ಸಾಲ್ಯಾನ್ ಶುಕ್ರವಾರ ಸಂಜೆ 3 ಗಂಟೆ ಸುಮಾರಿಗೆ ಕಾರ್ಕಳ ಕಡೆಯಿಂದ ಮೂಡುಬಿದಿರೆ ಕಡೆ ತನ್ನ ರಿಕ್ಷಾ ಚಲಾಯಿಸಿಕೊಂಡು ರಾಜ್ಯ ಹೆದ್ದಾರಿಯ ಅತ್ತೂರು ದ್ವಾರದ ಬಳಿ ಹೋಗುತ್ತಿರುವಾಗ ಇನ್ನೋವಾ ಕಾರು ಚಾಲಕ ಅಜೆಕಾರು ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡುಬಂದು ಆಟೋರಿಕ್ಷಾದ ಹಿಂದುಗಡೆ ಡಿಕ್ಕಿ ಹೊಡೆದಿದ್ದು ಇದರ ಪರಿಣಾಮ ಆಟೋ ರಿಕ್ಷಾ ಮುಗುಚಿ ಬಿದ್ದಿದೆ. ಇದರಿಂದ ಆಟೋ ರಿಕ್ಷಾ ಚಾಲಕ ರತ್ನಾಕರ ಕೆ.ಸಾಲ್ಯಾನ್ ಹಾಗೂ ಆಟೋರಿಕ್ಷಾದಲ್ಲಿ ಪ್ರಯಾಣ ಮಾಡುತ್ತಿದ್ದ ಸಾಧು ಇವರು ಆಟೋರಿಕ್ಷಾ ಸಮೇತ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಬಳಿಕ ಗಾಯಾಳುಗಳನ್ನು ಕಾರ್ಕಳ TMA ಪೈ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ರಿಕ್ಷಾ ಚಾಲಕ ರತ್ನಾಕರ ಎ ಸಾಲ್ಯಾನ್ ಗಂಭೀರ ಗಾಯಗೊಂಡ ಪರಿಣಾಮ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಅತ್ತಾವರದ ಕೆ.,ಎಮ್.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕನ ನಿರ್ಲಕ್ಷ್ಯತನದ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.
.
