Share this news

ಕಾರ್ಕಳ: ತಾಲೂಕಿನ ನಿಟ್ಟೆ ಗ್ರಾಮದ ಹೇನೊಟ್ಟು ಎಂಬಲ್ಲಿ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ನೆಟ್ಟಿದ್ದ ಶ್ರೀಗಂಧದ ಮರಗಳನ್ನು ಕಳ್ಳರು ಕಳವುಗೈದಿರುವ ಪ್ರಕರಣ ಜೂ.17 ರ ರಾತ್ರಿ ನಡೆದಿದೆ.

ನಿಟ್ಟೆಯ ದಿನೇಶ್ ಅವರು ತಮ್ಮ ಜಾಗದಲ್ಲಿ 225 ಶ್ರೀಗಂಧದ ಸಸಿಗಳನ್ನು ನೆಟ್ಟಿದ್ದು, ಜೂ.16 ರಂದು ಬೆಳಿಗ್ಗೆ ತೋಟಕ್ಕೆ ಹೋದಾಗ ಇದ್ದ ಮರಗಳು ಮರುದಿನ (ಜೂ.17) ಬೆಳಿಗ್ಗೆ ಹೋದಾಗ 4 ಲಕ್ಷ ರೂ. ಮೌಲ್ಯದ 9 ಶ್ರೀಗಂಧದ ಮರಗಳನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

 

 

Leave a Reply

Your email address will not be published. Required fields are marked *