ಕಾರ್ಕಳ: ಕಾರು ಚಾಲಕ ಏಕಾಎಕಿ ತನ್ನ ಕಾರಿನ ಡೋರ್ ತೆಗೆದ ಪರಿಣಾಮ ಚಲಿಸುತ್ತಿದ್ದ ಸ್ಕೂಟರಿಗೆ ಡೋರ್ ಬಡಿದು ಸವಾರ ಗಾಯಗೊಂಡಿದ್ದಾರೆ.
ಸ್ಕೂಟರ್ ಸವಾರ ಶ್ರೀನಾಥ್(48) ಗಾಯಗೊಂಡಿದ್ದು,ಅವರು ಗುರುವಾರ ಸಂಜೆ ತನ್ನ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ
ಕಾರ್ಕಳದ ಪೆರ್ವಾಜೆ ರಸ್ತೆಯ ಎಲ್ಐಸಿ ಕಚೇರಿಯ ಬಳಿ ಹೋಗುತ್ತಿದ್ದಾಗ ಕಾರು ಚಾಲಕ ಕಾರಿನಿಂದ ಇಳಿಯಲು ಡೋರ್ ತೆಗೆದ ಪರಿಣಾಮ ಶ್ರೀನಾಥ್ ಚಲಾಯಿಸುತ್ತಿದ್ದ ಸ್ಕೂಟರಿಗೆ ತಗುಲಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ