Share this news

 

ಕಾರ್ಕಳ: ರಾಮ ನವಮಿಯ ಪ್ರಯುಕ್ತ ಕಾರ್ಕಳ ಬೈಲೂರಿನ ತ್ರಿವರ್ಣ ಆರ್ಟ್‌ ಹಾಗೂ ಕರಾವಳಿ ಯೂತ್ ಕ್ಲಬ್ ವತಿಯಿಂದ ಇಲ್ಲಿನ ಕಲಾ ತರಗತಿಯ ವಿದ್ಯಾರ್ಥಿಗಳು ರಚಿಸಿದ 200 ಅಡಿ ವಿಸ್ತೀರ್ಣದ ಕಪ್ಪು ಮತ್ತು ಕೇಸರಿ ಬಟ್ಟೆಯಲ್ಲಿ ಅರಳಿದ ಶ್ರೀ ರಾಮನ ಅದ್ಭುತ ಕಲಾಕೃತಿಯು ಅನಾವರಣಗೊಂಡಿತು.

ತುಳು ರಂಗಭೂಮಿಯ ಖ್ಯಾತ ಕಲಾವಿದ, ನಿರ್ದೇಶಕ ಪ್ರಸನ್ನ ಶೆಟ್ಟಿ ಬೈಲೂರು ಮತ್ತಿತರರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಪುಷ್ಪಾರ್ಚನೆಗೈದರು.

ವಿದ್ಯಾರ್ಥಿಗಳಾದ ಹಿಮಾನಿ ಡಿ. ಶೆಟ್ಟಿ, ಪ್ರಥ್ವಿಜ್ ಶೆಟ್ಟಿ, ತೇಜಸ್‌ ದೇವಾಡಿಗ, ಸಾಕ್ಷಿತ್ ಶೆಟ್ಟಿ, ಸದ್ವಿನ್ ಶೆಟ್ಟಿ, ಸ್ಪರ್ಶ್ ಪೂಜಾರಿ ಮುಂತಾದವರು ಹಿರಿಯ ಕಲಾವಿದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ಈ ಆಕರ್ಷಕ ಕಲಾಕೃತಿಯನ್ನು ರಚಿಸಿದ್ದು ಎಲ್ಲರ ಗಮನ ಸೆಳೆದಿದೆ.

 

 

Leave a Reply

Your email address will not be published. Required fields are marked *