

ಕಾರ್ಕಳ: ಕಾರ್ಕಳ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾ ಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿ, ಮಕ್ಕಳಿಗೆ ದುಶ್ಚಟದ ಬಗ್ಗೆ ಅರಿವು ಮೂಡಿಸಲು ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಕಾಯಿಲೆಯಿಂದ ಬಳಲುವ ಜನಸಂಖ್ಯೆಗಿಂತ ದುಷ್ಟಕ್ಕೆ ಬಲಿಯಾಗಿ ಮರಣಹೊಂದುವವರ ಸಂಖ್ಯೆ ಹೆಚ್ಚಾಗಿದೆ ಆದುದರಿಂದ ಹದಿಹರೆಯದ ಮಕ್ಕಳು ನೀವು ನಿಮ್ಮ ಭವಿಷ್ಯವನ್ನು ದುಶ್ಚಟಮುಕ್ತ ಸಮಾಜ ಕಟ್ಟುವಲ್ಲಿ ಮುಡಿಪಾಗಿರುವಂತೆ ಮಾಹಿತಿಯನ್ನು ನೀಡುವುದರ ಜೊತೆಗೆ ಸ್ವಾಸ್ಥ್ಯ ಸಂಕಲ್ಪದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಪ್ರಾಂಶುಪಾಲ ಕುಮಾರ್ K.M ಧರ್ಮಸ್ಥಳ ಯೋಜನೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುನಿಯಾಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಧಾಕರ್ K.G, ಶೌರ್ಯ ವಿಪತ್ತು ನಿರ್ವಹಣೆಯ ಯೋಜನಾಧಿಕಾರಿ ಜೈವಂತ ಪಾಟ್ಕರ್ ಮತ್ತು ಕಿಶೋರ್, ಕಾಲೇಜ್ ನ ವಿಭಾಗ ಅಧಿಕಾರಿಗಳಾದ ಚಿತ್ರಾ ಕುಮಾರ್ K.V, ಮಲ್ಲಿಕಾ K, ಪವಿತ್ರ S. ಪುನೀತ್, ಬೋಧಕರಾದ ಬಾಲಚಂದ್ರ ಹೆಬ್ಬಾರ್, ಪ್ರವೇಶ ನಿರ್ವಹಕರಾದ ಗುಣಪಾಲ್ ಜೈನ್,ಕಾರ್ಕಳ ನಗರ ವಲಯದ ಮೇಲ್ವಿಚಾರಕಾರದ ಗೀತಾ ಹೆಗ್ಡೆ, ಕಾಬೆಟ್ಟು ಕಾರ್ಯಕ್ಷೆತ್ರದ ಸೇವಾಪ್ರತಿನಿಧಿ ಶೀತಲ್ ಹಾಗೂ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



