Share this news

ಕಾರ್ಕಳ, ಸೆ 25: ಕಾರ್ಕಳ ಟಿ.ಎಂ.ಪೈ ರೋಟರಿ ಆಸ್ಪತ್ರೆ,ರೋಟರಿ ಕ್ಲಬ್, ರಾಕ್ ಸಿಟಿ ಕಾರ್ಕಳ, ಭುವನೇಂದ್ರ ಕಾಲೇಜು ರೋಟರಿ ಕ್ಲಬ್ ಕಾರ್ಕಳ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ರೋರ‍್ಯಾಕ್ಟ್ ಕ್ಲಬ್ ಸಹಯೋಗದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಸೆ. .28ರಂದು ಹೃದಯಕ್ಕಾಗಿ ನಡಿಗೆ ವಾಕಥಾನ್ ಕಾರ್ಯಕ್ರಮ ನಡೆಯಲಿದೆ. ಸೆ 28ರಂದು ಭಾನುವಾರ ಬೆಳಗ್ಗೆ 7.30 ರಿಂದ ಕಾರ್ಕಳ ಅನಂತಶಯನ ವೃತ್ತದಿಂದ ಆರಂಭವಾಗುವ ನಡಿಗೆ ಟಿ.ಎಂ ಪೈ ರೋಟರಿ ಆಸ್ಪತ್ರೆ ಆವರಣದಲ್ಲಿ ಸಂಪನ್ನಗೊಳ್ಳಲಿದೆ.
ಕಾರ್ಕಳ ಶಾಸಕ ಸುನಿಲ್ ಕುಮಾರ್ ವಾಕಥಾನ್ ಗೆ ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಪ್ರಾಧ್ಯಾಪಕರು, ಸಮುದಾಯ ವೈದ್ಯಕೀಯ ವಿಭಾಗ ಕೆಎಂಸಿ ಮಣಿಪಾಲ & ಸದಸ್ಯ ಕಾರ್ಯದರ್ಶಿ ಕೆ ಎಂಸಿ ಮತ್ತು ಕಸ್ತೂರ್ಬಾ ಆಸ್ಪತ್ರೆ ಸಾಂಸ್ಥಿಕ ನೀತಿ ಸಮಿತಿ ಡಾ. ಮರಳೀಧರ್ ಎಂ.ಕುಲಕರ್ಣಿ, ಕೆ.ಎಂ ಸಿ ಮಣಿಪಾಲದ ಕಾರ್ಡಿಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಾವಿಯೋ.ಪಿ.ಡಿ.ಡಿಸೋಜ, ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ,ಭರತೇಶ್ ಆದಿರಾಜ್, ರೋಟರಿ ಜಿಲ್ಲಾ ವಲಯ ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ ಭಾಗವಹಿಸಲಿದ್ದಾರೆ.
ತದನಂತರ ಬೆಳಗ್ಗೆ 10 ಗಂಟೆಗೆ ಆಸ್ಪತ್ರೆಯ ಆವರಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾರ್ಕಳ ಟಿ.ಎಂ.ಪೈ ರೋಟರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕೀರ್ತಿನಾಥ್ ಬಳ್ಳಾಲ್, ಕಾರ್ಕಳ ರೋಟರಿ ಕ್ಲಬ್ ಮತ್ತು ರಾಕ್ ಸಿಟಿ ಅಧ್ಯಕ್ಷ ಸುರೇಂದ್ರ ನಾಯಕ್, ಕಾರ್ಕಳ ಭುವನೇಂದ್ರ ಕಾಲೇಜು ರೋರ‍್ಯಾಕ್ಟ್ ಅಧ್ಯಕ್ಷ ರಕ್ಷಣ್ ಹಾಗೂ ಕಾರ್ಕಳ ಸರ್ಕಾರಿ ಪಾಲಿಟೆಕ್ನಿಕ್ ರೋರ‍್ಯಾಕ್ಟ್ ಅಧ್ಯಕ್ಷ ಮಹೇಶ್ ನಾಯಕ್ ಉಪಸ್ಥಿತರಿರಲಿದ್ದಾರೆ ಎಂದು ಕಾರ್ಕಳ ಟಿ.ಎಂ ಪೈ ರೋಟರಿ ಆಸ್ಪತ್ರೆ ಪ್ರಕಟಣೆ ತಿಳಿಸಿದೆ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *