ಕಾರ್ಕಳ: ಕಾರ್ಕಳ ತಾಲೂಕು ಅಕ್ರಮ ಸಕ್ರಮ ಸಮಿತಿ ಸಭೆ ತಾಲೂಕು ಕಛೇರಿ ಸಭಾಂಗಣದಲ್ಲಿ ಶಾಸಕ ವಿ ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ (ಸೆ.25) ನಡೆಯಿತು.
ಸಮಿತಿಯ ಮುಂದೆ 35 ಕಡತಗಳನ್ನು ಹಾಜರಪಡಿಸಲಾಗಿತ್ತು. 17 ಹೊಸ ಕಡತಗಳಲ್ಲಿ 16 ಕಡತಗಳನ್ನು ಮಂಜೂರಾತಿ ಮಾಡಲಾಯಿತು. ಓರ್ವ ಗೈರು ಹಾಜರಾಗಿದ್ದರು. ನಕ್ಷೆಯಾಗಿ ಮಂಡಿಸಿರುವ 16 ಕಡತಕ್ಕೆ ಅಂತಿಮ ಮಂಜೂರಾತಿ ಆದೇಶ ನೀಡಲಾಯಿತು. 2 ಕಡತಗಳನ್ನು ಮರು ಸರ್ವೇಗೆ ಹಿಂದಿರುಗಿಸಲಾಯಿತು.
ಸಭೆಯಲ್ಲಿ ತಹಶೀಲ್ದಾರ್ ಪ್ರದೀಪ್ ಆರ್, ಉಪ ತಹಶೀಲ್ದಾರ್ ಮಂಜುನಾಥ ನಾಯಕ್, ಕಂದಾಯ ನಿರೀಕ್ಷಕರಾದ ರಿಯಾಜ್ ಮಹಮ್ಮದ್, ಶಿವಪ್ರಸಾದ್, ವಿಷಯ ನಿರ್ವಹಕರಾದ ತಾರೇಶ್, ಪೂಜಾ ಬಿ, ಸಮಿತಿ ಸದಸ್ಯರಾದ ರಮೇಶ್ ಬಜಕಲ, ಸುನೀತಾ ಶೆಟ್ಟಿ, ಕಾರ್ಕಳ ಹೋಬಳಿ, ಅಜೆಕಾರು ಹೋಬಳಿಯ ಸಿಬ್ಬಂದಿ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.