
ಕಾರ್ಕಳ, ಮಾ.31: ಕಾರು ಮತ್ತು ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಕಸಬಾ ಗ್ರಾಮದ ಕಾಬೆಟ್ಟು ಕ್ರಾಸ್ ಬಳಿ ಸೋಮವಾರ ನಡೆದಿದೆ.
ಮಿಯ್ಯಾರಿನ ಧನುಷ್ ಬಿ. ಅವರು ವರುಣ್ ಬಿ ಅವರೊಂದಿಗೆ ಬೈಕಿನಲ್ಲಿ ಪುಲ್ಕೇರಿ ಜಂಕ್ಷನ್ ಕಡೆಯಿಂದ ಬಂಡೀಮಠ ಕಡೆಗೆ ಹೋಗುತ್ತಿದ್ದಾಗ, ಬಂಗ್ಲೆಗುಡ್ಡೆಯಿಂದ ಅತ್ತೂರು ಕಡೆಗೆ ಹೋಗುತ್ತಿದ್ದ ಕಾರು ಯಾವುದೇ ಸೂಚನೆ ನೀಡದೆ ಬಲಕ್ಕೆ ತಿರುಗಿಸಿದಾಗ ಈ ಅಪಘಾತ ಸಂಭವಿಸಿದೆ.
ಅಪಘಾತದ ಪರಿಣಾಮ ಸಹಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೆ, ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















.
.
.
.
.
.
.
.
.
.
