

ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ರೋಟರಾಕ್ಟ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು, ರೋಟರಾಕ್ಟ್ ಕ್ಲಬ್ ಸರಕಾರಿ ಪಾಲಿಟೆಕ್ನಿಕ್ ಇವರ ಜಂಟಿ ಆಶ್ರಯದಲ್ಲಿ ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವರ ಸಹಯೋಗದೊಂದಿಗೆ ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ಹೃದಯಕ್ಕಾಗಿ ನಡಿಗೆ ಜಾಥ ವು ಸೆಪ್ಟೆಂಬರ್.28 ರಂದು ಅನಂತಶಯನ ವೃತ್ತ ದಿಂದ ಪ್ರಾರಂಭಗೊAಡು ರಥಬೀದಿಯಲ್ಲಿ ಆರಂಭಗೊAಡು ಬಂಡಿಮಠ ಮೂಲಕ ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಲ್ಲಿ ಕೊನೆಗೊಂಡಿತು. ಶಾಸಕ ವಿ ಸುನಿಲ್ ಕುಮಾರ್ ಜಾಥಾ ಕ್ಕೆ ಚಾಲನೆಯನ್ನು ನೀಡಿದರು.
ಸ್ಥಳೀಯ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳೊಂದಿಗೆ ಕಾರ್ಕಳದ ತಹಸೀಲ್ದಾರ್ ಪ್ರದೀಪ್ ಆರ್, ರೋಟರಿ ಸಹಾಯಕ ಗವರ್ನರ್ ರೋಟ ವಿಘ್ನಶ್ ಶೆಣೈ, ಮಾಜಿ ಜಿಲ್ಲಾ ಗವರ್ನರ್ ಡಾ. ಭರತೇಶ್ ಆದಿರಾಜ್ ಹಾಗೂ ರೋಟರಿ ಸದಸ್ಯರು ನಡಿಗೆಯಲ್ಲಿ ಸಾಗಿದರು.
ಬಳಿಕ ಕೆ ಎಂ ಸಿ ಮಣಿಪಾಲದ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕರಾದ ಡಾ. ಮುರಳೀಧರ್ ಎಂ ಕುಲಕರ್ಣಿಯವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಹೃದಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಿದರು.
ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ. ಭರತೇಶ್ ಆದಿರಾಜ್ ‘ವಿಶ್ವ ಹೃದಯ‘ ದಿನದ ಮಹತ್ವವನ್ನು ತನ್ನ ಪ್ರಾಸ್ತಾವಿಕ ಮಾತುಗಳಲ್ಲಿ ವಿವರಿಸಿದರು.
ತಹಸೀಲ್ದಾರ್ ಪ್ರದೀಪ್ ಆರ್. ರವರು ಇಂದಿನ ಕಾಲಘಟ್ಟಕ್ಕೆ ಇಂತಹ ಅರಿವು ಕಾರ್ಯಕ್ರಮಗಳು ಅತೀ ಅಗತ್ಯ ಎಂದು ರೋಟರಿಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.ಕೆಎಂಸಿ ಮಣಿಪಾಲದ ಹೃದ್ರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಾವಿಯೋ ಪಿ.ಡಿ‘ಸೋಜರವರು ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು.
ರೋಟರಾಕ್ಟ್ ಭುವನೇಂದ್ರ ಕಾಲೇಜು ಅಧ್ಯಕ್ಷ ರಕ್ಷಣ್, ರೋಟರಾಕ್ಟ್ ಕ್ಲಬ್ ಸರಕಾರಿ ಪಾಲಿಟೆಕ್ನಿಕ್ ಅಧ್ಯಕ್ಷ ಮಹೇಶ್ ನಾಯ್ಕ್ ವೇದಿಕೆಯಲ್ಲಿದ್ದರು.
ಆಸ್ಪತ್ರೆಯ ಮುಖ್ಯಾಧಿಕಾರಿ ಡಾ. ಕೀರ್ತಿನಾಥ್ ಬಲ್ಲಾಳ್ ಕಾರ್ಯಕ್ರಮದ ಶುಭಾಂಶನೆ ಮಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ರೋಟ ಸುರೇಂದ್ರ ನಾಯಕ್ ಸ್ವಾಗತಿಸಿ, ನಿವೃತ್ತ ಪ್ರಿನ್ಸಿಪಾಲರಾದ ರೋಟ ಗಣೇಶ್ ಬರ್ಲಾಯ ಅತಿಥಿಗಳ ಪರಿಚಯ ಮಾಡಿದರು. ರೋಟ ರಾಜೇಶ್, ರೋಟ ಹರೀಶ್ ಮತ್ತು ಆಸ್ಪತ್ರೆಯ ಸಿಬ್ಬಂದಿ ಶ್ರೀಮತಿ ಅನುಷಾ ಪ್ರಭು ನಿರೂಪಿಸಿದರು.


